ವರದಿ ಎನ್ ಶಾಮೀದ್ ತಾವರಗೇರಾ
ಕೊಪ್ಪಳ: ರಾಜ್ಯದಾದ್ಯಂತ ಕರೊನಾ ಸೊಂಕು ಹೆಚ್ಚಳ ಹಿನ್ನಲೆಯಲ್ಲಿ ಇಲಾಖೆಯ “ವೈಫಲ್ಯ ವೋ” ಅಥವಾ ಮೆಡಿಕಲ್ “ಮಾಫಿಯಾ ನೋ” ಎನ್ನುವುದು ಸಾರ್ವಜನಿಕರ ವಲಯದಲ್ಲಿ ಅನುಮಾನ ಮೂಡಿದ್ದು ರಾಜ್ಯದಾದ್ಯಂತ ಚರ್ಚೆಗೆ ಪ್ರಮುಖ ಕಾರಣವಾಗಿದೆ.
ಅದಕ್ಕೆ ಉದಾಹರಣೆ ಎನ್ನುವಂತೆ ಯಾವುದೇ ವ್ಯಕ್ತಿ ಪರೀಕ್ಷೆ ಗೆ ಒಳಪಡದೇ ಕರೊನಾ ಪಾಸಿಟಿವ್ ಎಂಬ ಸಂದೇಶ ಅವರ ಮೊಬೈಲ್ ಗೆ ಬರುತ್ತಿದ್ದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಕರೊನಾ ಲಕ್ಷಣ ವಿಲ್ಲದಿದ್ದರೂ ಹಾಗೂ ಪರೀಕ್ಷೆ ಗೆ ಒಳಪಡದೆ ಇದ್ದರೂ ಕೂಡ ಕರೊನಾ ಪಾಸಿಟಿವ್ ಎಂಬ ಸಿದ್ದ ಸಂದೇಶ ಬರುತ್ತಿರುವದರಿಂದ ಸರ್ಕಾರ ಹಾಗೂ ಇಲಾಖೆಯ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಯವರಿಗೆ ಕೇಳಲಾಗಿ ಅವರು, ಇಲಾಖೆಯ ತಂತ್ರಾಂಶ ದೋಷದಿಂದಾಗಿ ಈ ರೀತಿ ಬರುತ್ತಿರುವುದು ನಮ್ಮ ಗಮನಕ್ಕೂ ಬಂದಿತ್ತು, ಇದನ್ನು ಯಾರ ಹತ್ತಿರ ಹೇಳಿಕೊಳ್ಳಬೇಕು ಎಂಬುದು ನಮಗೆ ತಿಳಿಯದಂತಾಗಿದೆ ಎಂದು ಹೆಸರೆಳಲಿಚ್ಚಿಸದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅದರಂತೆ ಸರ್ಕಾರ ಹಾಗೂ ಇಲಾಖೆಯವರ ಈ ರೀತಿಯ ಕರೊನಾ ಪಾಸಿಟಿವ್ ಅಂಕಿ ಅಂಶಗಳನ್ನು ಹೆಚ್ಚಾಗಿ ತೋರಿಸಬೇಕೆಂಬುದು “ಸರ್ಕಾರದ ಆದೇಶ ವೋ” ಅಥವಾ “ಇಲಾಖೆಯ ನಿರ್ಲಕ್ಷ್ಯ ವೋ” ಎಂಬುದು ಸಾರ್ವಜನಿಕರ ಪ್ರಶ್ನೆ ಯಾಗಿದೆ? ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಗಮನ ಹರಿಸದಿದ್ದಲ್ಲಿ ರಾಜ್ಯದಾದ್ಯಂತ ಜನತೆ ಸರ್ಕಾರದ ನಿಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸುವುದರ ಜೊತೆಗೆ ಸರ್ಕಾರದ ವಿರುದ್ಧ ಈಡಿ ರಾಜ್ಯದ ಜನತೆ ತಿರುಗಿಬೀಳುವದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ಪರಿಣಿತರ ಅಭಿಪ್ರಾಯ ವಾಗಿದೆ.