Thursday , September 19 2024
Breaking News
Home / Breaking News / ಮುದಗಲ್ : ಹಾಡ ಹಗಲೇ ಮನೆ ಕಳ್ಳತನ….

ಮುದಗಲ್ : ಹಾಡ ಹಗಲೇ ಮನೆ ಕಳ್ಳತನ….

ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಪಟ್ಟಣದ ವೆಂಕಟರಾಯನಾಪೇಟೆಯ ಮನೆಯೊಂದರಲ್ಲಿ  ಹಾಡ ಹಗಲೇ ಮನೆಯಲ್ಲಿದ  ನಗದು ಹಾಗೂ  ಚಿನ್ನ  ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಪಟ್ಟಣದ ತರಕಾರಿ ವ್ಯಾಪಾರಿಯಾದ  ಶಕಿಲಾಬೀ   ಗಂಡ ಅಲ್ಲಾಬಕ್ಷ ಖುರೇಶಿ ಎಂಬುವರ ಮನೆಯಲ್ಲಿ ಮಂಗಳವಾರ ಸಾಯಂಕಾಲ 5 ಗಂಟೆಯ ಸುಮಾರಿಗೆ ಯಾರು ಇಲ್ಲದನ್ನು ಗಮನಿಸಿ ಮನೆಯ ಬೀಗ ಒಡೆದು  ಒಳನುಗ್ಗಿರುವ ಕಳ್ಳರು ಟ್ರಂಕ್  ನಲ್ಲಿರುವ ಸಾಮಾನುಗಳನ್ನು  ಚೆಲ್ಲಾಪಿಲ್ಲಿ ಮಾಡಿ  ನಗದು ಹಾಗೂ ಚಿನ್ನ ದೋಚಿ ಪರಾರಿಯಾಗಿದ್ದಾರೆ. ಕೆಲಸ ಮುಗಿಸಿ ಮನೆಗೆ ಬಂದ  ಮೇಲೆ ವಿಷಯ ಗೋತ್ತಾಗಿದೆ. ಹಾಡ ಹಗಲೇ ಕಳ್ಳತನವಾಗಿರುವುದರಿಂದ ಪಟ್ಟಣದ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ. ಮುದಗಲ್  ಪೊಲೀಸ್ ಠಾಣೆಯ ಕ್ರೈಮ್ ಪಿಎಸ್ಐ ಅವಿನಾಶ್ ಕಾಂಬ್ಳೆ ಘಟನಾಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!