ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಪಟ್ಟಣದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯ ಚರಂಡಿ ಪಕ್ಕದಲ್ಲಿದ್ದ 12ನೇ ಶತಮಾನಕ್ಕೆ ಸಂಬಂಧಿಸಿದ ಅತಿ ಮುಖ್ಯವಾದ ಕರಿ ಕಲ್ಲಿನ ಜೈನರ ತೀರ್ಥಂಕರನಾದ ಪಾರ್ಶ್ವನಾಥ ವಿಗ್ರಹ,ವೀರಗಲ್ಲುಗಳು,ಮಾಸ್ತಿಕಲ್ಲುಗಳು ಹಾಗೂ
ಸೂರ್ಯ ಪೀಠ,ತಳಕು ಹಾಕಿದ ನಾಗ ಶಿಲ್ಪಗಳು, ನಂದಿ ವಿಗ್ರಹ, ವ್ಯಕ್ತಿ ಆನೆಯೊಂದಿಗೆ ಸೆಣಸುವುದು, ನಟ ರಾಜ ಶಿಲ್ಪ, ವಿಷ್ಣು ಶಿಲ್ಪ, ವೀರಗಲ್ಲು, ಮಹಾಸತಿಗಲ್ಲು ಜತೆ ಅನೇಕ ಧರ್ಮಗಳ ಶಿಲ್ಪ ಶಾಸನಗಳಿದ್ದು. ಅವು ಮಣ್ಣಿನಲ್ಲಿ ಬೆರೆತು ಹೋಗುತ್ತಿವ ಸ್ಥಿತಿಯಲ್ಲಿದ್ದ ಮೂರ್ತಿಗಳನ್ನ
ಪಟ್ಟಣದ ಜೈ ಭೀಮ್ ಯುವ ಘರ್ಜನೆ ಸೇವಾ ಸಂಸ್ಥೆ ಹಾಗೂ ಯುವಬ್ರೇಗೇಡ್ ವತಿಯಿಂದ ಸ್ವಚ್ಛತಾಕಾರ್ಯ ಮಾಡಿ ಪೂಜೆಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಧ್ಯಕ್ಷ ಗುಂಡಪ್ಪ ಗಂಗಾವತಿ, ಅಧ್ಯಕ್ಷ ಪೂರ್ಣನಂದ ಉಪಾಧ್ಯಕ್ಷ ಮಂಜುನಾಥ,ರಾಮು,ಪ್ರಧಾನ ಕಾರ್ಯದರ್ಶಿ ಸಂತೋಷ,ಕಾರ್ಯದರ್ಶಿ ಯಮನಪ್ಪ,ಖಜಾಂಚಿ ರಾಹುಲ್,ಸದಸ್ಯರಾದ ಅಶೋಕ್, ವಿನೋದ್,ಅರುಣ, ಗೋಪಾಲ್ , ರಾಕೇಶ್ ಹಾಗೂ ಪುರಸಭೆ ನೈರ್ಮಲ್ಯ ಅಧಿಕಾರಿ ಮಹೇಶ್ ಸಮಾಜ ಸೇವಕರಾದ ಡಾ ಅಮರಗುಂಡಪ್ಪ, ಷಣ್ಮುಖ, ಮಾರುತಿ ನವೀನ್ ಚನ್ನಬಸವ ಮಡಿವಾಳರ್ ಇದ್ದರು.