ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಪಟ್ಟಣದಲ್ಲಿ ಈಗಾಗಲೇ ಎರೆಡು ಕರೋನ ಅಲೆಗಳನ್ನು ಎದುರಿಸಿರುವ ಜನರಿಗೆ ಈಗ ಮೂರನೇ ಅಲೆಯು ಪ್ರಾರಂಭವಾರುವುದು ಆತಂಕ ಮೂಡಿಸಿದೆ ಜ 6ಗುರುವಾರ ಮುದಗಲ್ ಪಟ್ಟಣದ 29ವರ್ಷದ ಯುವಕನಿಗೆ ಕೋವಿಡ್ 19 ಪಾಸಿಟಿವ್ ಪತ್ತೆಯಾಗಿದ್ದು ಪಟ್ಟಣದ ನಿವಾಸಿಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ದಿ 06-01-2022 ರಂದು ಸೋಂಕಿತ ವ್ಯಕ್ತಿಯ ಗಂಟಲು ದ್ರವ ವನ್ನ ಕೋವಿಡ್ ಪರೀಕ್ಷೆಗಾಗಿ ನೀಡಿರುತ್ತಾರೆ ದಿ 06-01-2022 ರಂದು ವರದಿ ಪಾಸಿಟಿವ್ ಬಂದಿದ್ದು ಸೋಂಕಿತನನ್ನ ಹೋಮ್ ಐಶೂಲೇಷನ್ ನಲ್ಲಿ ಇರಿಸಲಾಗಿದ್ದು ಸೋಂಕಿತರ ಮನೆಯ ಸುತ್ತ ಸ್ಯಾನಿಟೇಜರ್ ಮಾಡಲಾಗಿದೆ. ಈ ವಿಚಾರವಾಗಿ ಪತ್ರಿಕೆಯೊಂದಿಗೆ ಮಾತನಾಡಿದ ಮುದಗಲ್ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಧಿಕಾರಿಗಳಾದ ಅನಂತ ಕುಮಾರ್ ಸಾರ್ವಜನಿಕರು ಕರೋನ ಮೂರನೇ ಅಲೆಯ ವಿರುದ್ಧದ ಹೋರಾಟಕ್ಕೆ ಸಿದ್ದರಾಗಬೇಕು ಜನರಲ್ಲಿ ನೆಗಡಿ, ಕೆಮ್ಮು ಜ್ವರದಂತಹ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ಮುದಗಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ಗಂಟಲು ದ್ರವ ಪರೀಕ್ಷೆಗೆ ನೀಡಿ ಸರಕಾರದ ಕರೋನ ನಿಯಮಗಳನ್ನು ಪಾಲಿಸಿ ಕರೋನ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ, ಜಾಗೃತರಾಗಿರಿ ಎಂದರು. ಈ ಸಂದರ್ಭ ಪುರಸಭೆ ನೈರ್ಮಲ್ಯಧಿಕಾರಿ ಮಹೇಶ್, ಸಿಬ್ಬಂದಿ ಸಂಜೀವಪ್ಪ,ವಿನೋದ್ ಇದ್ದರು.