ನಾಗರಾಜ್ ಎಸ್ ಮಡಿವಾಳರ್
ರಾಯಚೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಮತ್ತು ಓಮೈಕ್ರಾನ್ ಹರಡುವಿಕೆಯನ್ನ ನಿಯಂತ್ರಿಸಲು ರಾಜ್ಯ ಸರ್ಕಾರ ಜಾರಿ ಮಾಡಿರುವ ಹೊಸ ಮಾರ್ಗಸೂಚಿಯಂತೆ ರಾಯಚೂರು ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 8ಗಂಟೆಯಿಂದ ಸೋಮವಾರ ಬೆಳಿಗ್ಗೆ 5ರ ವರೆಗೆ ಜಿಲ್ಲಾಯದ್ಯಂತ ನಿಷೇಧಾಜ್ಞೆ ಜಾರಿ ಮಾಡಿ ರಾಯಚೂರು ಜಿಲ್ಲಾಧಿಕಾರಿ ಡಾ. ಅವಿನಾಶ್ ಮನನ್ ರಾಜೇಂದ್ರನ್ ರವರು ಆದೇಶ ಹೊರಡಿಸಿದ್ದಾರೆ.
1973. ದಂಡ ಪ್ರಕ್ರಿಯ ಕಲಂ 144 ರನ್ವಯ ಜಿಲ್ಲೆಯಾದ್ಯಂತ ಕಳೆದ 05-01-2022 ರಿಂದ 19-01-2022 ರ ವರೆಗೆ ಪ್ರತಿದಿನ ರಾತ್ರಿ 10-00 ಗಂಟೆಯಿಂದ ಮರು ದಿನ ಬೆಳಿಗ್ಗೆ 05-00 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಹಾಗೂ ದಿನಾಂಕ:07-01-2022 . ಶುಕ್ರವಾರ ರಾತ್ರಿ 8-00 ಗಂಟೆಯಿಂದ ದಿನಾಂಕ:10-01-2022 ಸೋಮವಾರ ಬೆಳಿಗ್ಗೆ 05-00 ಗಂಟೆಯವರೆಗೆ ಹಾಗೂ ಮುಂದಿನ ವಾರ ದಿನಾಂಕ 14-01-2022 ರ ಶುಕ್ರವಾರ ರಾತ್ರಿ 8-00 ಗಂಟೆಯಿಂದ ದಿನಾಂಕ :17-01-2022 ರ ಸೋಮವಾರ ಬೆಳಿಗ್ಗೆ 05-00 ಗಂಟೆಯವರೆಗೆ ವಾರಾಂತ್ಯದ ಕರ್ಫ್ಯೂ, ಜಾರಿಯಲಿದ್ದು ಅಗತ್ಯ ವಸ್ತುಗಳಾಗಿರುವ ಹಾಲು, ಹಣ್ಣು, ತರಕಾರಿ, ದಿನಸಿ ಅಂಗಡಿಗಳು, ಔಷಧಿ ಅಂಗಡಿಗಳ ಚಟುವಟಿಕೆಗಳನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ 4 ಜನಕ್ಕಿಂತ ಹೆಚ್ಚು ಜನರು ಅನಗತ್ಯವಾಗಿ, ಗುಂಪು ಸೇರುವಂತಿಲ್ಲ ಮತ್ತು ಸಾರ್ವಜನಿಕರು, ಅನಗತ್ಯವಾಗಿ ಓಡಾಡುವುದನ್ನು, ಸಭೆ ಸಮಾರಂಭಗಳನ್ನು ನಿರ್ಬಧಿಸಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ರಾಯಚೂರು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.