ವರದಿ : ನಾಗರಾಜ್ ಎಸ್ ಮಡಿವಾಳರ್
ಲಿಂಗಸುಗೂರು: ತಾಲೂಕು ಕರ್ನಾಟಕ ಜಾನಪದ ಪರಿಷತ್ತು, ಮಹಿಳಾ ಘಟಕದಿಂದ ಜ.8 ಕ್ಕೆ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕು ಕರ್ನಾಟಕ ಜಾನಪದ ಪರಿಷತ್ತು, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ ನಡುವಿಮನಿ ಹೇಳಿದರು.
ಪಟ್ಟಣದ ಪ್ರತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಶಾಲಾ-ಕಾಲೇಜು ಮಕ್ಕಳಿಗೆ ಸಾಹಿತ್ಯಾಭಿರುಚಿ, ಜ್ಞಾನಾತ್ಮಕ ವಿಕಾಸ ಹಾಗೂ ಸ್ಫರ್ಧಾ ಮನೋಭಾವನೆ ಬೆಳೆಸುವ ಉದ್ದೇಶದಿಂದ ಜ.8 ಕ್ಕೆ ಲಿಂಗಸುಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ. ಈ ಸ್ಫರ್ಧೆಯಲ್ಲಿ ಭಾಗವಹಿಸುವ ಸ್ಫರ್ಧಾರ್ಥಿಗಳಿಗೆ ಬೆಳಿಗ್ಗೆ 10.00 ಗಂಟೆಗೆ ತಂಡದ ಆಯ್ಕೆ ಪರೀಕ್ಷೆ ನಡೆಯಲಿದೆ. 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ 10 ತಂಡ ಮಾಡಲಾಗುತ್ತದೆ. ಆಯ್ಕೆಯಾದ ತಂಡಗಳಿಗೆ ಪ್ರಶ್ನೆ ಕೇಳಲಾಗುತ್ತದೆ. ಕೇಳಿದ ಪ್ರಶ್ನೆಗಳು ಎಲ್.ಇ.ಡಿಯಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಕಾರ್ಯಕ್ರಮ ಚಿತ್ರಿಕರಣ ಮಾಡಲಾಗುತ್ತದೆ. ಲಿಂಗಸುಗೂರು ಸರ್ ಎಂ ವಿಶ್ವಶ್ವೇರಯ್ಯ ವಿಜ್ಞಾನ ಕಾಲೇಜು ಪ್ರಾಯೋಜಿತ ಪ್ರಥಮ ಬಹುಮಾನ 21 ಸಾವಿರ ರೂಪಾಯಿ, ಹಿರಿಯ ವಕೀಲರಾದ ಮುದಕಪ್ಪ ನೀರಲಕೇರಿ ಪ್ರಾಯೋಜಿತ ದ್ವಿತೀಯ ಬಹುಮಾನ 15 ಸಾವಿರ ರೂಪಾಯಿ ಹಾಗೂ ತೃತೀಯ ಬಹುಮಾನ 9 ಸಾವಿರ ರೂಪಾಯಿ ಹಾಗೂ ಪ್ರಶಸ್ತಿ ಪ್ರಮಾನ ಪತ್ರ, ಮೆಡಲ್ ನೀಡಲಾಗುತ್ತದೆ.
ಸ್ಫರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಚಲನಚಿತ್ರ, ವಿಜ್ಞಾನ, ಜಾನಪದ, ಅರ್ಥಶಾಸ್ತ್ರ, ಇತಿಹಾಸ, ರಾಜಕೀಯ, ನಮ್ಮ ಸುತ್ತ ಹಾಗೂ ಪ್ರಚಲಿತ ಘಟನೆಗಳ ಮೇಲೆ ಪ್ರಶ್ನೆಗಳು ಕೇಳಲಾಗುತ್ತಿದೆ.
ಲಿಂಗಸುಗೂರು ಸರ್ ಎಂ ವಿಶ್ವಶ್ವೇರಯ್ಯ ವಿಜ್ಞಾನ ಕಾಲೇಜು ವಿದ್ಯರ್ಥಿಗಳಿಂದ ಜಾನಪದ ಸಂಭ್ರಮ ಕಾರರ್ಯಕ್ರಮ ಜರುಗಲಿದೆ.
ರಸಪ್ರಶ್ನೆಯಲ್ಲಿ ಭಾಗವಹಿಸಲು ಇಚ್ಛೆ ಇರುವ ವಿದ್ಯಾಥರ್ಿಗಳು ಜ. 7 ಒಳಗಾಗಿ 10 ರೂಪಾಯಿ ಕೊಟ್ಟು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಉಪನ್ಯಾಸಕರಾದ ಶಿವಾನಂದ ನರಹಟ್ಟಿ ಮೊ: 9880656748, ಕಮಲಾಕ್ಷಿ ಶಿವಶರಣಯ್ಯ ಸೊಪ್ಪಿಮಠ, ಮೊ: 9008214804, ಸಂಪಕರ್ಸಿಸಬೇಕು.
ಈ ಸಂಧರ್ಭದಲ್ಲಿ ತಾಲೂಕು ಕರ್ನಾಟಕ ಜಾನಪದ ಪರಿಷತ್ತು, ಮಹಿಳಾ ಘಟಕ ಗೌರವಾಧ್ಯಕ್ಷೆ ಶಿವಮ್ಮಪಟ್ಟದಕಲ್, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಬಿ. ಮೂಲಿಮನಿ ಇದ್ದರು.