ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಅದೃಷ್ಟದಾಟ ಬಲ್ಲವರಾರು, ಎಂಬ ನಾನ್ನುಡಿ ಅಂತೆ ನಡೆದ ಪಪಂ ಫಲಿತಾಂಶದಲ್ಲಿ ಸಮ ಮತಗಳನ್ನು ಪಡೆದುಕೊಂಡು ನಂತರ ಚೀಟಿ ಎತ್ತಿದಾಗ ಬಿಜೆಪಿಯ ಅಭ್ಯರ್ಥಿ ದಶರಥ ಸಿಂಗ್ ಜಯದ ಮಾಲೆಯನ್ನು ತಮ್ಮದಾಗಿಸಿಕೊಂಡರು.
ಪಟ್ಟಣದ 1 ನೇ ವಾರ್ಡಿನಿಂದ ಕಾಂಗ್ರೆಸ್ ನ ಹನುಮಂತ ಸಿಂಗ್ ಹಾಗೂ ಬಿಜೆಪಿಯಿಂದ ಸ್ಫರ್ಧಿಸಿದ್ದ ದಶರಥ ಸಿಂಗ್ ಇವರು ತಲಾ 242 ಮತಗಳನ್ನು ಪಡೆಯುವ ಮೂಲಕ ಸಮಬಲ ಸಾದಿಸಿದ್ದರು, ನಂತರ ಚುನಾವಣಾ ನಿಯಮದ ಪ್ರಕಾರ ಇಬ್ಬರು ಅಭ್ಯರ್ಥಿಗಳ ಫಲಿತಾಂಶ ವನ್ನು ತಹಶಿಲ್ದಾರರ ರಾದ ಎಂ ಸಿದ್ದೇಶ ರವರು ಚೀಟಿ ಎತ್ತುವ ಪ್ರಕ್ರಿಯೆ ನಡೆಸುವಂತೆ ಚುನಾವಣಾ ಅಧಿಕಾರಿಗಳಿಗೆ ತಿಳಿಸಿದರು ನಂತರ ಚೀಟಿ ಎತ್ತಿದಾಗ ಅದೃಷ್ಟವು ದಶರಥ ಸಿಂಗ್ ನ ಪಾಲಾಗಿ ಜಯದ ನಗೆ ಬೀರಿದರೆ, ದುರದೃಷ್ಟವಶಾತ್ ಸಮಬಲ ಮತ ಪಡೆದರು ಕೂಡ ಜಯದ ಮಾಲೆ ಹಾಕಿಕೊಳ್ಳುವಲ್ಲಿ ಹನುಮಂತ ಸಿಂಗ್ ನಿರಾಸೆ ಗೊಂಡರು.