ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಪಟ್ಟಣದ ಶ್ರೀ ಮತಿ ಪದ್ಮಾವತಿ ರಾಘವೇಂದ್ರರಾವ್ ದೇಶಪಾಂಡೆ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಉಪನ್ಯಾಸಕರ ಕೊರತೆ ನಿಗಿಸುವಂತೆ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ರವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಚನ್ನಬಸವ ಮಡಿವಾಳರ್ ಕಾಲೇಜಿನಲ್ಲಿ
ಸಮಾರು 400ವಿದ್ಯಾರ್ಥಿಗಳಿದ್ದು ಬಿ ಎ, ಬಿ ಕಾಂ, ಬಿ ಎಸ್ ಸಿ, ಕೋರ್ಸ್ ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ ಪ್ರತಿದಿನ ನಡೆಯಬೇಕಾದ ತರಗತಿಗಳು ನಡೆಯುತ್ತಿಲ್ಲ, ಕೆಲವು ವಿಷಯಗಳಿಗೆ ಉಪನ್ಯಾಸಕರೇ ಇಲ್ಲ, ಹಲವು ಬಾರಿ ಪ್ರಾಚಾರ್ಯರ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಮುಂದಿನ ಎರೆಡು ತಿಂಗಳು ಕಳೆದರೆ ನಮಗೆ ಪರೀಕ್ಷೆ ಬರುತ್ತಿವೆ ಇನ್ನು ಕೂಡ ಉಪನ್ಯಾಸಕರು ಇರುವುದಿಲ್ಲ ಅತಿಥಿ ಉಪನ್ಯಾಸಕರು ಕೂಡ ಧರಣಿ ಕೈಗೊಂಡಿದ್ದಾರೆ ಹೀಗಾಗಿ ನಮಗೆ ಅತೀವ ತೊಂದರೆ ಯಾಗುತ್ತಿದ್ದು
400ವಿದ್ಯಾರ್ಥಿಗಳ ಭವಿಷ್ಯದಲ್ಲಿ ಏನಾಗುತ್ತದೆಯೋ ಎಂಬ ಭಯದಿಂದ ವಿದ್ಯಾರ್ಥಿಗಳು ಕಂಗಲಾಗಿದ್ದು
ಶಾಸಕರು ಇತ್ತ ಗಮನಹರಿಸಿ
ಈ ಕೂಡಲೇ ಸಂಬಂದಿಸಿದ ಅಧಿಕಾರಿಗಳ ಗಮನಕ್ಕೆ ತಂದು ವಿದ್ಯಾರ್ಥಿಗಳ ಸಮಸ್ಯೆ ಪರಿಹಾರ ಕೊಡಿಸಬೇಕು ಎಂದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾವೂದ್ ಸಾಬ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಪಾಟೀಲ್,ವಿದ್ಯಾರ್ಥಿಗಳಾದ
ಮೊಹಮ್ಮದ್ ಸಮೀರ್,ನಾರಾಯಣ, ವಿಶ್ವ
,ರಮೇಶ್, ಪಂಚಾಕ್ಷರಿ ಇನ್ನಿತರರು ಇದ್ದರು.