ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಪಟ್ಟಣದ 15 ವಾಡ್೯ ಗಳಲ್ಲಿ ನಡೆದ ಚುನಾವಣೆ ಯಲ್ಲಿ ಶೇಕಡಾ 80.69% ರಷ್ಟು ಮತದಾನವಾಗಿದ್ದು, ಬಹುತೇಕ ಶಾಂತಿಯುತ ವಾಗಿ ನಡೆಯಿತು.
ಒಟ್ಟು 8783 ಮತ ಚಲಾವಣೆಯಾಗಿದ್ದು 4426 ಪುರುಷ ಮತದಾರರು ಹಾಗೂ 4357 ಮಹಿಳೆಯರು ಮತಚಲಾಯಿಸಿದ್ದಾರೆ. ಸಣ್ಣ ಪುಟ್ಟ ಘಟನೆಗಳನ್ನು ಹೊರತು ಪಡಿಸಿ ಶಾಂತಿಯುತ ವಾಗಿ ಮತದಾನ ನಡೆಯಿತು.
ಅಭ್ಯರ್ಥಿಗಳ ಭವಿಷ್ಯ ವನ್ನು ಮತದಾರರು ಬರೆದಿದ್ದು ಅಭ್ಯರ್ಥಿಗಳು ತಮ್ಮ ಸೋಲು ಹಾಗೂ ಗೆಲುವಿನ ಲೆಕ್ಕಾಚಾರ ದಲ್ಲಿ ತೊಡಗಿದ್ದು ಕಳೆದ ಕೆಲ ದಿನಗಳಿಂದ ಚುನಾವಣೆ ಗುಂಗಿನಲ್ಲಿದ್ದ ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಫಲಿತಾಂಶದ ಮೇಲೆ ಕಣ್ಣಿಟ್ಟಿದ್ದಾರೆ. ಮತದಾನದ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 7 ಸ್ಥಾನ, ಬಿಜೆಪಿ 5, ಹಾಗೂ ತೀವ್ರ ಪೈಪೋಟಿ ನೀಡಿರುವ ಪಕ್ಷೇತರ ರು 3. ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಒಟ್ಟಿನಲ್ಲಿ ಪಪಂ ಚುನಾವಣೆಯಲ್ಲಿ ಯಾರು ಬಹುಮತ ಪಡೆಯುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ, ಅತಂತ್ರ ಪಪಂ ಆಗಬಹುದೆಂಬುದು ಪಟ್ಟಣದ ನಾಗರಿಕರ ಅನಿಸಿಕೆಯಾಗಿದೆ.
ಒಟ್ಟಿನಲ್ಲಿ ಚುನಾವಣಾ ಕಾವಿನಿಂದ ಅಭ್ಯರ್ಥಿಗಳು ಕೊಂಚ ಬಿಡುವು ಪಡೆದುಕೊಂಡಿದ್ದಾರೆ, ಚುನಾವಣಾ ಫಲಿತಾಂಶಕ್ಕಾಗಿ ಎದರು ನೋಡುತ್ತಿದ್ದಾರೆ. ಮತದಾನದ ಸಂದರ್ಭದಲ್ಲಿ ಕುಷ್ಟಗಿ ತಹಶಿಲ್ದಾರರ ರಾದ ಎಂ ಸಿದ್ದೇಶ ಹಾಗೂ ಸಿಬ್ಬಂದಿ ವರ್ಗ, ಕುಷ್ಟಗಿ ಸಿಪಿಐ ನಿಂಗಪ್ಪ ಎನ್ ಆರ್, ಹನಮಸಾಗರ ಪಿಎಸ್ಐ ಅಶೋಕ ಬೇವೂರ, ಕುಷ್ಟಗಿ ಪಿಎಸ್ಐ ತಿಮ್ಮಣ್ಣ ನಾಯಕ, ಸ್ಥಳೀಯ ಪಿಎಸ್ಐ ವೈಶಾಲಿ ಝಳಕಿ, ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ 2 ಡಿಆರ್ ವಾಹನಗಳು, ಕಂದಾಯ ಇಲಾಖೆ ಸಿಬ್ಬಂದಿ, ಚುನಾವಣಾ ಅಧಿಕಾರಿಗಳಾದ ಶ್ರೀ ಶೈಲ ಸೋಮನಕಟ್ಟಿ, ತಿಪ್ಪೆಸ್ವಾಮಿ, ಬಸವರಾಜ, ಸಂತೋಷ ಸೇರಿದಂತೆ ಮತ್ತಿತರ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟು ಶಾಂತಿಯುತ ಮತದಾನ ನಡೆಯುವಂತೆ ನೋಡಿಕೊಂಡರು.