ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಪಪಂ ಚುನಾವಣೆಯ ಮತದಾನ ಸೋಮವಾರ ನಡೆಯಲಿದ್ದು ಈಗಾಗಲೇ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯು ಪಟ್ಟಣದಲ್ಲಿ ಸರ್ಪಗಾವಲು ಹಾಕಿದೆ. ಈ ಕುರಿತಂತೆ ಸಿಪಿಐ ಎನ್ ಆರ್ ನಿಂಗಪ್ಪ ಮಾಹಿತಿ ನೀಡಿ ಒಟ್ಟು 18 ಮತಗಟ್ಟೆಗಳಲ್ಲಿ 5 ಮತಗಟ್ಟೆಗಳನ್ನು ಅತೀ ಸೂಕ್ಷ್ಮ ಹಾಗೂ 5 ಸೂಕ್ಷ್ಮ ಮತಗಟ್ಟೆಗಳು, ಹಾಗೂ 8 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದ್ದು ಒಬ್ಬರು ಸಿಪಿಐ, 3 ಜನ ಪಿಎಸ್ಐ , 5 ಜನ ಎಎಸ್ಐ, 18 ಜನ ಎಚ್ ಸಿ, ಮಹಿಳಾ ಪಿಸಿ ಸೇರಿದಂತೆ 28 ಜನ ಹಾಗೂ 2 ಡಿಆರ್ ಸಿಬ್ಬಂದಿಗಳ ವಾಹನ ಈ ರೀತಿಯಾಗಿ ಬಂದೋಬಸ್ತ್ ಗೆ ನಿಯೋಜಿಸಲಾಗಿದ್ದು ಪಟ್ಟಣದಲ್ಲಿ ಸಾರ್ವಜನಿಕರು ಶಾಂತಿಯಿಂದ ಮತದಾನ ದಲ್ಲಿ ಪಾಲ್ಗೊಳ್ಳಬೇಕೆಂದು ಸ್ಥಳೀಯ ಠಾಣಾಧಿಕಾರಿ ವೈಶಾಲಿ ಝಳಕಿ ತಿಳಿಸಿದ್ದಾರೆ.