ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಚುನಾವಣಾಧಿಕಾರಿಗಳ ಪರಿಪೂರ್ಣ ಮಾಹಿತಿಯ ಕೊರತೆಯಿಂದಾಗಿ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಪ್ರಚಾರ ನಡೆಸಲು ಶಾಸಕರು ಮುಂದಾಗಿದ್ದಾರೆಂದು ಸ್ಥಳೀಯ ನಾಗರಿಕಾ ಸೇವಾ ಸಮಿತಿ ಆರೋಪಿಸಿದ್ದರಿಂದ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.
ಸದ್ಯ ಪಟ್ಟಣದಲ್ಲಿ ಪೊಲೀಸರು ಬೀಡು ಬಿಟ್ಟು ಪರಿಸ್ಥಿತಿ ಹತೋಟಿಗೆ ತರಲು ಯಶಸ್ವಿಯಾಗಿದ್ದಾರೆ. ಚುನಾವಣಾ ಅಧಿಕಾರಿಗಳ ಅಪೂರ್ಣ ಮಾಹಿತಿಯೇ ಈ ಘಟನೆಗೆ ಕಾರಣವಾಗಿದ್ದು ನಂತರ ಸ್ಥಳಕ್ಕೆ ತಹಶಿಲ್ದಾರರ ರಾದ ಎಂ ಸಿದ್ದೇಶ, ಕುಷ್ಟಗಿ ಸಿಪಿಐ ಎನ್ ಆರ್ ನಿಂಗಪ್ಪ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು ನಂತರ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ಕ್ಕೆಂದು ಸ್ಥಳೀಯ ಪಂಚಾಯತ ಮುಂದಿನ ಆವರಣದ ರಸ್ತೆಯಲ್ಲಿ ಪ್ರಚಾರ ಸಭೆ ನಡೆಸುವುದಕ್ಕೆ ಅವಕಾಶ ಮಾಡಿ ಕೊಡಬಾರದೇಂದು ಸೇವಾ ಸಮಿತಿ ಯವರು ಅಧಿಕಾರಿಗಳಿಗೆ ಒತ್ತಾಯಿಸಿದರು.
ನಂತರ ಅಧಿಕಾರಿಗಳು ಈ ಬಗ್ಗೆ ನಿಯಮದಂತೆ ಪಾಲಿಸುವದಾಗಿ ತಿಳಿಸಿದರು, ಆಗ ಶಾಸಕ ಅಮರೇಗೌಡ ಬಯ್ಯಾಪೂರ ಅಲ್ಲಿಯೇ ಚುನಾವಣಾ ಪ್ರಚಾರ ಕೈಗೊಂಡರು ಈ ಸಂದರ್ಭದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಳ್ಳುತ್ತಿದ್ದನ್ನು ಕಂಡಾಗ ಅಧಿಕಾರಿಗಳು ಎರಡು ಕಡೆಯವರನ್ನು ಸಮಾಧಾನ ಪಡೆಸುವಲ್ಲಿ ಮುಂದಾದರು ನಂತರ ಸೇವಾ ಸಮಿತಿಯವರು ಮಾತನಾಡಿ ಶಾಸಕರು ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರ ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು. ಸದ್ಯ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.