ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಮತದಾರರಿಗೆ ಹಣದ ಆಮಿಷ ತೋರಿಸಿ ಚುನಾವಣೆ ಗೆಲ್ಲುವುದು ಕಾಂಗ್ರೆಸ್ ಸಂಸ್ಕ್ರತಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಪಟ್ಟಣದ 14,15,16,17 ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಾಜಿ ಸಚಿವ ಬಸವರಾಜ ರಾಯರಡ್ಡಿ ಮತದಾನ ಮಾಡಲು ರಾಜಕೀಯ ಮುಖಂಡರಿಂದ ಹಣ ಪಡೆಯುವಂತೆ ಹೇಳಿರುವುದು ನೋಡಿದರೆ ಅವರ ಪಕ್ಷದ ಉದ್ದೇಶ ಏನೆಂದು ಅರ್ಥವಾಗುತ್ತದೆ. ಆದ್ದರಿಂದ ಪ್ರಜ್ಞಾವಂತ ಮತದಾರರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಅಭಿವೃದ್ಧಿ ಗುರುತಿಸಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಬೇಕು ಮತ್ತು ಪಟ್ಟಣದ ಕುಡಿಯುವ ನೀರಿನ ಯೋಜನೆಗಾಗಿ 88 ಕೋಟಿ ಮಂಜೂರು ಮಾಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಳ್ಳುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಜಿಪಂ ಸದಸ್ಯ ಕೆ ಮಹೇಶ, ಮುಖಂಡರಾದ ಶೇಖರಗೌಡ ಪೊಲೀಸ್ ಪಾಟೀಲ್, ಬಿಜೆಪಿ ತಾಲೂಕ ಅಧ್ಯಕ್ಷ ಬಸವರಾಜ ಹಳ್ಳೂರು, ಚಂದ್ರಕಾಂತ ವಡಗೇರಿ, ಉಮೇಶ್ ಯಾದವ, ಸಂಗಮೇಶ ಮುಶಿಗೆರಿ, ವಿಜಯ ಕುಮಾರ್ ಹಿರೇಮಠ, ಮಂಜುನಾಥ ಜೂಲಕುಂಟಿ, ಮಹೇಶ ದಂಡಿನ, ಶೈಲಜಾ ಬಾಗ್ಲಿ, ವೀರೇಶ ನಾಲತವಾಡ ಹಾಗೂ ಅಭ್ಯರ್ಥಿಗಳಾದ ಯಮನಮ್ಮ ಯಾದವ, ದುರುಗಮ್ಮ ಮುಖಿಯಾಜಿ, ಶಾಮೂರ್ತಿ ಅಂಚಿ, ನಾರಾಯಣ್ ಸಿಂಗ್ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.