ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಪಟ್ಟಣ ಪಂಚಾಯತ ಚುನಾವಣೆಯಲ್ಲಿ ನಾಗರಿಕ ಸೇವಾ ಸಮಿತಿ ವತಿಯಿಂದ ಮತ್ತೊಬ್ಬ ಅಭ್ಯರ್ಥಿಯು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿ ಗೆ ಶಾಕ್ ನೀಡಿದ್ದಾರೆ.
12 ನೇ ವಾರ್ಡಿನಿಂದ ಸ್ಪರ್ಧೆ ಬಯಸಿದ್ದ ಸಯ್ಯದ್ ಶಫೀ ಮುಲ್ಲಾ ಅವಿರೋಧವಾಗಿ ಆಯ್ಕೆಯಾಗುವ ಪಪಂ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ಸೇವಾ ಸಮಿತಿ ವತಿಯಿಂದ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಪ್ರಥಮ ಹಂತದಲ್ಲಿಯೇ ಯಶಸ್ಸು ಕಂಡಿದ್ದು ಚುನಾವಣೆಗೂ ಮುನ್ನವೇ ಭರ್ಜರಿಯಾಗಿ ಪಪಂ ನಲ್ಲಿ ಹಿಡಿತ ಸಾದಿಸುವಲ್ಲಿ ಯಶಸ್ಸು ಕಂಡಿದೆ. ಸಮಿತಿಯಿಂದ ಮೊದಲ ಅವಿರೋಧವಾಗಿ 2 ನೇ ವಾರ್ಡನಲ್ಲಿ ಸ್ಪರ್ಧಿಸಿದ್ದ, ಕರಡೆಪ್ಪ ನಾಲತವಾಡ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅದೇ ರೀತಿಯಾಗಿ ಉಳಿದ ವಾರ್ಡಗಳಲ್ಲಿ ಕೂಡ ಹೆಚ್ಚನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲುಸುವ ಮೂಲಕ ಸಮಿತಿಯಿಂದಲೇ ಪಟ್ಟಣ ಪಂಚಾಯತ ವಶಕ್ಕೆ ತಯಾರಿ ನಡೆಸಿದ್ದೆವೆಂದು ಸಮಿತಿಯ ಮುಖಂಡರು ತಿಳಿಸಿದ್ದಾರೆ.
ಪಟ್ಟಣದ 13 ನೇ ವಾರ್ಡಿನಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧೆ ಬಯಸಿದ್ದ ಬೇಬಿ ರೇಖಾ ಉಪ್ಪಳ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಪಕ್ಷವು ಖಾತೆ ತೆರದಂತಾಗಿದ್ದು ಇನ್ನುಳಿದ 15 ವಾರ್ಡ ಗಳಲ್ಲಿ ಚುನಾವಣಾ-ಕಣ ರಂಗೇರಲಿದೆ. ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಭಾರೀ ಹೊಡೆತ ಬೀಳುವ ಮುಖಾಂತರ ಸೇವಾ ಸಮಿತಿಯು ಸ್ಪಷ್ಟ ಪೈಪೋಟಿ ನೀಡುವಲ್ಲಿ ಸಜ್ಜಾಗಿರುವುದು ಪಟ್ಟಣದ ಜನರ ಕುತೂಹಲ ಕ್ಕೆ ಕಾರಣವಾಗಿದೆ.