ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಎಸ್ಐ ಬಸವರಾಜ ನಾಯಕವಾಡಿ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ನಿಧನ ಹೊಂದಿರುವುದು ಪೊಲೀಸ್ ಇಲಾಖೆಯ ಜೊತೆಗೆ ಈಡೀ ಜಿಲ್ಲೆಯ ಜನರಿಗೆ ಆಘಾತಕಾರಿಯಾಗಿದೆ.
ಪಪಂ ಚುನಾವಣೆಯ ಕರ್ತವ್ಯ ಮುಗಿಸಿ ನಂತರ ಠಾಣೆಯ ರೋಲ್ ಕಾಲ್ ಸಮಯದಲ್ಲಿ ಠಾಣೆಯಲ್ಲಿ ಹಾಜರಿದ್ದು ಎಲ್ಲರೊಂದಿಗೆ ಬೆರೆತು ಕ್ಷಣ ಮಾತ್ರದಲ್ಲಿ ಹೃದಯಾಘಾತದಿಂದ ನಿಧನ ಹೊಂದಿರುವುದು ಆಘಾತಕಾರಿ ವಿಷಯ ವಾಗಿದ್ದು ಸ್ಥಳೀಯ ಠಾಣಾಧಿಕಾರಿ ವೈಶಾಲಿ ಝಳಕಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ಸ್ಥಳೀಯ ಜನತೆ ಕೂಡ ನಂಬಲಾರದಂತ ವಿಷಯ ತಿಳಿಯುತ್ತಿದ್ದಂತೆ ಸ್ತಬ್ದರಾಗಿದ್ದಾರೆ.
ಒಟ್ಟಿನಲ್ಲಿ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಬಸವರಾಜ ನಾಯಕವಾಡಿ ಇನ್ನಿಲ್ಲದಿರುವುದು, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಸಿಬ್ಬಂದಿಗಳು ಅಗಲಿದ ಬಸವರಾಜ ನಾಯಕವಾಡಿ ಅವರ ಕುಟುಂಬಕ್ಕೆ ಸಾಂತ್ವನದ ಜೊತೆಗೆ ಕಂಬನಿ ಮಿಡಿದಿದ್ದಾರೆ.