ವರದಿ : ನಾಗರಾಜ್ ಎಸ್ ಮಡಿವಾಳರ್
ರಾಯಚೂರು : ಇದೆ ಡಿಸೆಂಬರ್ 10ರಂದು ನಡೆದಿರುವ ರಾಯಚೂರು -ಕೊಪ್ಪಳ ವಿಧಾನ ಪರಿಷತ್ತಿನ ಚುನಾವಣೆ ಮತಗಳ ಏಣಿಕೆ ಆರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಈಗಾಗಲೇ ರಾಯಚೂರಿನಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು ಒಟ್ಟು 6488ಮತಗಳಿದ್ದು 14ಟೇಬಲ್ ಗಳಲ್ಲಿ 24ಸುತ್ತುಗಳ ಮೂಲಕ ಏಣಿಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ರಾಯಚೂರು ಜಿಲ್ಲಾಧಿಕಾರಿ ಡಾ. ಅವಿನಾಶ್ ಮನನ್ ರಾಜೇಂದ್ರ ರವರು ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು
ರಾಯಚೂರು -ಕೊಪ್ಪಳ ವಿಧಾನ ಪರಿಷತ್ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಚುನಾವಣೆ ನಡೆದಿದ್ದು ಬಿಜೆಪಿಯ ವಿಶ್ವಾನಾಥ್ ಬನಹಟ್ಟಿ , ಕಾಂಗ್ರೆಸ್ ನ ಶರಣಗೌಡ ಬಯ್ಯಪೂರ ಹಾಗೂ ಪಕ್ಷೇತರರು ಕಣಕ್ಕಿಳಿದಿದ್ದಾರೆ. ಕೆಲವೇ ಗಂಟೆಗಳಲ್ಲಿ ಮತದಾರ ಯಾರಿಗೆ ಗೆಲುವಿನ ಕಿರೀಟ ಇಡಲಿದ್ದಾನೆ ಎಂದು ಕಾದು ನೋಡಬೇಕಿದೆ.