ನಾಗರಾಜ್ ಎಸ್ ಮಡಿವಾಳರ್
ಲಿಂಗಸಗೂರು: ತಾಲೂಕಿನ ಪರಾಂಪುರ ಮೂಲದ ಒಂದು ವರ್ಷದ ಮಗುವಿನ ಮೇಲೆ ಟ್ರ್ಯಾಕ್ಟರ್ ಹರಿದು ಮಗು ಸ್ಥಳದಲ್ಲೇ ಸಾವನ್ನಪಿದ ಘಟನೆ ನಡೆದಿದೆ.
ಲಿಂಗಸಗೂರು ತಾಲೂಕಿನ ಪರಾಂಪುರ ಗ್ರಾಮದ ಕುಟುಂಬ ಒಂದು ಬೀಳಗಿ ತಾಲೂಕಿನಲ್ಲಿ ಕಬ್ಬು ಕಡಿಯುವ ಕೆಲಸಕ್ಕೆ ಹೋಗಿದ್ದ ಸೋಮಪ್ಪ ಪರಂಪೂರ ಎಂಬುವವರ ಮಗು ಮೃತಪಟ್ಟಿದೆ
ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಮಗುವಿನ ತಾಯಿ ಮಗು ಬಿಸಿಲಲ್ಲಿ ಮಲಗಿದೆ ಎಂದು ಗದ್ದೆಯಲ್ಲಿ ನಿಂತಿದ್ದ ಟ್ಯಾಕ್ಟರ್ ಪಕ್ಕದಲ್ಲಿದ್ದ ನೆರಳನ್ನು ಕಂಡು ಅಲ್ಲೆಯೇ ಮಗುವನ್ನು ಮಲಗಿಸಿ ಹೋಗಿದ್ದಾಳೆ. ಕೆಲ ಸಮಯದ ನಂತರ ಟ್ಯಾಕ್ಟರ್ ನತ್ತ ಆಗಮಿಸಿದ ಚಾಲಕ ಮಗುವನ್ನು ಗಮನಿಸದೆ ಟ್ಯಾಕ್ಟರ್ ಚಲಾಯಿಸಿದ್ದು ಚಕ್ರಕ್ಕೆ ಸಿಲುಕಿದ ಮಗು ಸ್ಥಳದಲ್ಲೇ ಸಾವನ್ನಪಿದೆ.
ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು
ಘಟನಾಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.