ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಪಟ್ಟಣದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಸಮಾನ ಮನಸ್ಕರ ಸಭೆ ಸೇರಿ ಬರುವ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಪಕ್ಷಾತೀತವಾಗಿ ಎಲ್ಲಾ ಪಕ್ಷಗಳನ್ನು ತಿರಸ್ಕರಿಸಿ ತಾವರಗೇರಾ ನಾಗರಿಕರ ಸಮೀತಿ ರಚಿಸಿ, ಪಟ್ಟಣದ ಎಲ್ಲಾ ವಾರ್ಡಗಳಲ್ಲೂ ಸಮಿತಿ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಯಿತು.
ಪಟ್ಟಣದ ರಾಜಕೀಯ ದೃವೀಕರಣಕ್ಕೆ ಕಾರಣವಾಗಿರುವುದು ಪ್ರಮುಖ ಪಕ್ಷಗಳ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿರುವುದಂತು ಸತ್ಯ..!
ಪಟ್ಟಣದ ಅಭಿವೃದ್ಧಿ ಹಿತದೃಷ್ಟಿಯಿಂದ ಸಮಿತಿ ರಚನೆ ಮಾಡಲಾಗಿದ್ದು ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವೀರಭದ್ರಪ್ಪ ನಾಲತವಾಡ, ನಾದೀರಪಾಷಾ ಮುಲ್ಲಾ, ಚಂದ್ರಶೇಖರ್ ನಾಲತವಾಡ, ಕಳಕನಗೌಡ ಪಾಟೀಲ್, ಸಾಗರ ಭೇರಿ, ಕುಬೇರಪ್ಪ ಕ್ಯಾಡೇದ, ಅಂಬಣ್ಣ ಕಂದಗಲ್, ಶಾಮಣ್ಣ ಮಡ್ಡೆರ, ಉಮೇಶ ಬಡಿಗೇರ, ಬಸವರಾಜ ಈಳಿಗೇರ, ಮಲ್ಲಪ್ಪ ಬಳೂಟಗಿ, ಮಜರ್ ಪಾಷಾ ಮುಲ್ಲಾ, ಮಲ್ಲಪ್ಪ ಹೂಗಾರ, ಹನುಮಾನ ಸಿಂಗ್ ಗುಡಸಲಿ, ಶೇಖಪ್ಪ ಗುಬ್ಬಿ, ಶರಣಪ್ಪ ಜುಮಲಾಪೂರ, ವಿಎಸ್ ಗುಡುದೂರ ಸೇರಿದಂತೆ ಎಲ್ಲಾ ಪಕ್ಷದ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.