Friday , September 20 2024
Breaking News
Home / Breaking News / ಕುಷ್ಟಗಿ: ಗ್ರಾಮೀಣ ಭಾಗದ ರೈತರನ್ನು ವಂಚಿಸುತ್ತಿದ್ದ ಕಳ್ಳನ ಬಂಧನ..!

ಕುಷ್ಟಗಿ: ಗ್ರಾಮೀಣ ಭಾಗದ ರೈತರನ್ನು ವಂಚಿಸುತ್ತಿದ್ದ ಕಳ್ಳನ ಬಂಧನ..!

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ: ಅನಕ್ಷರಸ್ಥರು ಹಾಗೂ ಗ್ರಾಮೀಣ ಪ್ರದೇಶದ ಜನರನ್ನೆ ಗುರಿಯಾಗಿಸಿಕೊಂಡು ಎಟಿಎಮ್ ಮಶಿನ್ ನಿಂದ ಹಣ ಡ್ರಾ ಮಾಡಿ ಕೊಡುವ ನೆಪದಲ್ಲಿ ಹಣವನ್ನು ದೋಚುತ್ತಿದ್ದ ಖತರ್ನಾಕ ಕಳ್ಳನನ್ನು ಕುಷ್ಟಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ಆರೋಪಿಯನ್ನು ಕಂದಕೂರ ಗ್ರಾಮದ ಚಾಲಕ ಮಂಜುನಾಥ ಸಂಗನಾಳ ಉಪ್ಪಾರ ನನ್ನು ಬಂಧಿಸಲಾಗಿದ್ದು ಆತನನ್ನು ವಿಚಾರಣೆ ಮಾಡಲಾಗಿ ಸುಮಾರು ಒಂದು ವರ್ಷದಿಂದ ಎಟಿಎಮ್ ಗೆ ಬರುವ ರೈತರು ಮತ್ತು ಅನಕ್ಷರಸ್ಥ ರನ್ನು ಗುರಿಯಾಗಿಸಿಕೊಂಡು ಹಣ ಡ್ರಾ ಮಾಡಿ ಕೊಡುವ ನೆಪದಲ್ಲಿ, ಎಟಿಎಮ್ ಕೇಂದ್ರದಲ್ಲಿ ಪಿನ್ ಒತ್ತುವುದನ್ನು ನೋಡಿ ಹಣ ಡ್ರಾ ಮಾಡಿಕೊಟ್ಟು ನಂತರ ತನ್ನ ಕೈಚಳಕದಿಂದ ತನ್ನಲ್ಲಿರುವ ಬೇರೆಯವರ ಹೆಸರಿನಲ್ಲಿರುವ ಎಟಿಎಮ್ ಕಾರ್ಡ ಕೊಟ್ಟು ಮೋಸ ಮಾಡಿ ಕಳಿಸಿದ ನಂತರ ಬೇರೆ ಎಟಿಎಮ್ ಗೆ ಹೋಗಿ ಕಾರ್ಡ ಹಾಗೂ ಪಿನ್ ಹಾಕಿ ಹಣ ಡ್ರಾ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಈ ರೀತಿಯ ಪ್ರಕರಣಗಳಲ್ಲಿ 1 ಲಕ್ಷ ರೂಪಾಯಿ ನಗದು ಹಣ ಹಾಗೂ ಗ್ರಾಮೀಣ ಜನರಿಗೆ ಮೋಸ ಮಾಡಲು ಉಪಯೋಗಿಸಿದ ಅನಧಿಕೃತ ಎಟಿಎಮ್ ಕಾರ್ಡಗಳನ್ನು ಪೊಲೀಸರಿಗೆ ಒಪ್ಪಿಸಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಡಿವಾಯ್ ಎಸ್ ಪಿ ಆರ್ ಎಸ್ ಉಜ್ಜನಕೊಪ್ಪ, ಕುಷ್ಟಗಿ ಸಿಪಿಐ ನಿಂಗಪ್ಪ ಎನ್ ಆರ್, ಕುಷ್ಟಗಿ ಪಿಎಸ್ಐ ತಿಮ್ಮಣ್ಣ ನಾಯಕ, ಸಿಬ್ಬಂದಿಗಳಾದ ಪ್ರಶಾಂತ, ಪರಶುರಾಮ, ಅಮರೇಶ, ಎಮ ಡಿ ಹಿನಾಯಥ್ ತನಿಖೆ ಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!