Friday , September 20 2024
Breaking News
Home / Breaking News / ತಾವರಗೇರಾ: ನೋಟ್ ಬುಕ್ ವಿತರಿಸಿ “ಮಕ್ಕಳ” ದಿನಾಚರಣೆ ಆಚರಿಸಿದ ಕುಷ್ಷಗಿ ಸಿಪಿಐ..!

ತಾವರಗೇರಾ: ನೋಟ್ ಬುಕ್ ವಿತರಿಸಿ “ಮಕ್ಕಳ” ದಿನಾಚರಣೆ ಆಚರಿಸಿದ ಕುಷ್ಷಗಿ ಸಿಪಿಐ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ದಲಿತರ ಕುಂದು ಕೊರತೆ ಸಭೆಯಲ್ಲಿ ಪಾಲ್ಗೊಂಡಿದ್ದ ಕುಷ್ಟಗಿ ಸಿಪಿಐ ಎನ್ ಆರ್ ನಿಂಗಪ್ಪ ಅಲ್ಲಿ ಸೇರಿದ್ದ ಮಕ್ಕಳಿಗೆ ಪೆನ್ನು ಪುಸ್ತಕದ ಜೊತೆಗೆ ಸಿಹಿ ಹಂಚುವ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಸಿಕೊಂಡಿರುವುದು ಸಾರ್ವಜನಿಕರ ಪ್ರಶಂಸೆ ಗೆ ಕಾರಣವಾಯಿತು.


ಭಾನುವಾರ ದಂದು ಇಲ್ಲಿಯ ದಲಿತರ ಕಾಲೋನಿಯಲ್ಲಿ ನಡೆದ ಸಭೆಯ ನಂತರ ಅಲ್ಲಿ ಸೇರಿದ್ದ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿ ಅವರೊಂದಿಗೆ ಕೆಲವು ಕ್ಷಣಗಳನ್ನು ಸಂತೋಷದಿಂದ ಹಂಚಿಕೊಂಡ ಎನ್ ಆರ್‌ ನಿಂಗಪ್ಪ ಅವರು ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂಬ ಸದೂದ್ದೇಶದಿಂದ ಮಕ್ಕಳ ದಿನಾಚರಣೆಯನ್ನು ‌ವಿಶೇಷವಾಗಿ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಪಿಎಸ್ಐ ವೈಶಾಲಿ ಝಳಕಿ, ಹಾಗೂ ಸಿಬ್ಬಂದಿಗಳಾದ ಬಸವರಾಜ ಇಂಗಳದಾಳ, ಗುಂಡಪ್ಪ, ಕರಿಯಪ್ಪ, ಸೇರಿದಂತೆ ದಲಿತ ಮುಖಂಡರು ಉಪಸ್ಥಿತರಿದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!