ವರದಿ ಎನ್ ಶಾಮೀದ್ ತಾವರಗೇರಾ
ಕೊಪ್ಪಳ: ವಿಧಾನ ಪರಿಷತ್ ಚುನಾವಣೆಗೆ ಕ್ಷಣಗಣನೆ ಆರಂಭ ವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಸದ್ಯದಲ್ಲಿಯೇ ನಡೆಯಲಿದ್ದು, ಕೊಪ್ಪಳ ಹಾಗೂ ರಾಯಚೂರ ಜಿಲ್ಲೆಯ ಜನರ ಕುತೂಹಲಕ್ಕೆ ಕಾರಣವಾಗಿದ್ದು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಈಗಾಗಲೇ ನಡೆದಿದ್ದು ಎಲ್ಲಾ ಮೂಲಗಳ ಪ್ರಕಾರ ಕಾಂಗ್ರೆಸ್ ನಿಂದ ಶರಣೇಗೌಡ ಪಾಟೀಲ್ ಬಯ್ಯಾಪೂರ ಸ್ಪರ್ಧೆ ಬಹುತೇಕ ಖಚಿತ ವಾಗಿದ್ದು, ಬಿಜೆಪಿ ಯಿಂದ ಸಿ ವಿ ಚಂದ್ರಶೇಖರ ಅವರು ಸ್ಪರ್ಧೆಗೆ ಹಿಂದೆಟು ಹಾಕುತ್ತಿದ್ದು ಅವರ ಬದಲಾಗಿ ಬಿಜೆಪಿ ಯಿಂದ ಪ್ರಮುಖವಾಗಿ ಶರಣು ತಳ್ಳಿಕೇರಿ ಹಾಗೂ ರಾಯಚೂರಿನ ಈ ಆಂಜನೇಯ, ಬಸನಗೌಡ ಬ್ಯಾಗವಾಟ್ ಹಾಗೂ ವಿಶ್ವನಾಥ ಬನ್ನಟ್ಟಿ ಹೆಸರು ಕೇಳಿ ಬರುತ್ತಿದ್ದು ಅಂತಿಮವಾಗಿ ಯಾರಿಗೆ ಟಿಕೆಟ್ ಫೈನಲ್ ಆಗುತ್ತದೆ ಎಂಬ ಕುತೂಹಲ ವಾಗಿದೆ. ಇತ್ತ ಜೆಡಿಎಸ್ ನಿಂದ ಯಾವುದೇ ಅಭ್ಯರ್ಥಿಗಳು ಕಣಕ್ಕಿಳಿಯುವ ಸಾಧ್ಯತೆ ಇಲ್ಲ. ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಪ್ರಭಾವ ಹೊಂದಿರುವ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ತಮ್ಮ ಅಣ್ಣನ ಮಗನಾದ ಶರಣೇಗೌಡ ಬಯ್ಯಾಪೂರ ಅವರಿಗೆ ಟಿಕೇಟ್ ಕೊಡಿಸುವ ಶತ ಪ್ರಯತ್ನ ನಡೆಸುತ್ತಿದ್ದು, ಬಸವರಾಜ ಪಾಟೀಲ್ ಇಟಗಿ ಯವರ ಹೆಸರು ಕೇಳಿ ಬಂದಿದ್ದರು ಕೂಡ ಸ್ಪರ್ಧಗೆ ಅವರು ಹಿಂದೆಟು ಹಾಕುತ್ತಿರುವುದು ತಿಳಿದು ಬಂದಿದ್ದು ಬಹುತೇಕ ಶರಣೇಗೌಡ ಬಯ್ಯಾಪೂರ ಗೆ ಸಿಗುವ ಸಾಧ್ಯತೆ ಹೆಚ್ಚಾಗಿ ಕೇಳಿ ಬರುತ್ತಿದೆ.