ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಶಾಲೆಗೆ ಚಕ್ಕರ ಹೊಡೆದು ಕರ್ತವ್ಯ ಲೋಪ ಎಸಗಿ ಗ್ರಾಮಸ್ಥರ ವಿರೋಧಕ್ಕೆ ಕಾರಣರಾದ ಇಬ್ಬರು ಶಿಕ್ಷಕರಲ್ಲಿ ಪ್ರಭಾರಿ ಮುಖ್ಯಶಿಕ್ಷಕನಿಗೆ ಅಮಾನತ್ತು ಮಾಡಲಾಗಿದ್ದು, ಇನ್ನೊಬ್ಬ ಶಿಕ್ಷಕನಿಗೆ ಕಾರಣ ಕೇಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಸಮೀಪದ ಜೂಲಕುಂಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ರುದ್ರಪ್ಪ ಎಚ್ ಅಮಾನತ್ತು ಗೊಂಡಿದ್ದು, ಇನ್ನೊಬ್ಬ ಶಿಕ್ಷಕ ಮುರ್ತುಜಾ ಮದಭಾವಿ ಗೆ ನೋಟಿಸ್ ಜಾರಿ ಮಾಡಿದ್ದಾರೆ.
ಜೂಲಕುಂಟಿ ಶಾಲಾ ಆವರಣದಲ್ಲಿ ನೂತನ ಅಂಗನವಾಡಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಇದ್ದರೂ, ಆ ದಿನದಂದು ಶಾಲೆಗೆ ಬೀಗ ಹಾಕಿ ಕರ್ತವ್ಯ ಲೋಪ ಎಸಗಿದ್ದು, ಕಂಡುಬಂದ ಹಿನ್ನೆಲೆಯಲ್ಲಿ ಜೂಲಕುಂಟಿ ಗ್ರಾಮಸ್ಥರ ದೂರಿನ ಮೇರೆಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಆದೇಶದ ಮೇರೆಗೆ ಇಬ್ಬರು ಶಿಕ್ಷಕರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಆದೇಶಿಸಿದ್ದು, ಜೊತೆಗೆ ಕಾರ್ಯಕ್ರಮದ ಕುರಿತು ಗ್ರಾಮಸ್ಥರು ತಿಳಿ ಹೇಳಿದರು ಕೂಡ, ಯಾರೇ ಬಂದರು ನಾನು ಇರುವುದಿಲ್ಲ, ಹೋಗುತ್ತೆನೆ ಎಂಬ ದೂರ ವರ್ತನೆ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚನಬಸಪ್ಪ ಎಂ ನವೆಂಬರ್ 2 ರಿಂದ ಜಾರಿಗೆ ಬರುವಂತೆ ಅಮಾನತ್ತು ಆದೇಶ ಹೋರಡಿಸಿದ್ದಾರೆ.