ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಸಮೀಪದ ಹೊಸೂರು ಗ್ರಾಮದಲ್ಲಿ
ಬುಧವಾರ ಮದ್ಯಾಹ್ನ 12.30ರ ಸುಮಾರಿಗೆ ಹೊಲದಲ್ಲಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದ ವೈರ್ ಒಂದಕ್ಕೆ ಒಂದು ತಾಗಿ ಅದರಿಂದ ಉಂಟಾದ ಬೆಂಕಿಯಿಂದ ಸುಮಾರು 12 ಎಕರೆಯಲ್ಲಿ ಇದ್ದ ಕಬ್ಬು ಸಂಪೂರ್ಣ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ .
ಬೆಂಕಿಗೆ ಆಹುತಿಯಾದ ಕಬ್ಬಿನ ಬೆಳೆ 3ಎಕರೆ ಸಂಗಣ್ಣ ರಾಮಾತ್ನಾಳ ,9ಎಕರೆ ಶರಣಗೌಡ ಬೆರಗಿ ಎಂಬುವವರಿಗೆ ಸೇರಿದ್ದಾಗಿದೆ. ರೈತರು ತಮ್ಮ ಹೊಲದಲ್ಲಿ ವಿದ್ಯುತ್ ವೈರ್‌ಗಳನ್ನು ಕಬ್ಬಿನ ಬೆಳೆಗೆ ತಾಕುವಂತೆ ಕೆಳಗೆ ಇದ್ದವು ವಿದ್ಯುತ್ ಇಲಾಖೆ ನಿರ್ಲಕ್ಷದ ಕಾರಣ ಈ ಅವಘಡ ನಡೆದಿದೆ ಎಂದು ರೈತರು ಕಣ್ಣೀರಿಟ್ಟರು.
ರೈತರ ಆಕ್ರೋಶ: ವಿದ್ಯುತ್ ಇಲಾಖೆಗೆ ಎಷ್ಟು ಬಾರಿ ಮನವಿ ಮಾಡಿಕೊಂಡರು ಕೂಡ ವಿದ್ಯುತ್ ಇಲಾಖೆ ಸಿಬ್ಬಂದಿಗಳು ನಿರ್ಲಕ್ಷ ತೋರಿದ್ದರು ಈಗ ಆ ವಿದ್ಯುತ್ ವೈರ್‌ನಿಂದ ಉಂಟಾದ ಬೆಂಕಿ ಕಿಡಿಯಿಂದ
ಬೆಳೆಗಳಿಗೆ ಬೆಂಕಿ ತಗುಲಿದೆ. ಸಿಬ್ಬಂದಿಗಳು ಸಕಾಲದಲ್ಲಿ ಸ್ಪಂದಸಿದ್ದರೆ ಇಂತಹ ಅನಾಹುತ ಸಂಭವಿಸುತ್ತಿರಲಿಲ್ಲ. ಬೆಂಕಿ ಅನಾಹುತಕ್ಕೆ ವಿದ್ಯುತ್ ಅಧಿಕಾರಿಗಳೇ ನೇರ ಹೊಣೆಗಾರರಾಗಿದ್ದು, ಬೆಂಕಿ ಅನಾಹುತದಿಂದ ನೊಂದಿರುವ ರೈತರಿಗೆ ನಷ್ಟ ಭರಿಸಿಕೊಡುವಂತೆ ರೈತರು ಆಗ್ರಹಿಸಿದ್ದಾರೆ.