ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಸಮೀಪದ ಹಂಚಿನಾಳ ರಾಜ್ಯ ಹೆದ್ದಾರಿಯಲ್ಲಿ ರುವ ಟೋಲ್ ಗೇಟ್ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದರೂ ಕೂಡ ವಾಹನ ಗಳಿಂದ ಹಣ ವಸೂಲಿ ಮಾಡುತ್ತಿದ್ದರು ಕೂಡ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಪಾಲಿಗೆ ಸಾವಿನ ಮೂಲದ ಗೇಟಾಗಿ ಪರಿವರ್ತನೆಯಾಗಿರುವುದು ವಿಪರ್ಯಾಸವೇ ಸರಿ ಮತ್ತು ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಯಾವುದೇ ಜೀವನ ಭದ್ರತೆ ಇಲ್ಲದಿರುವುದು ಅಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು, ಜೀವದ ಭಯದಲ್ಲೆ ಕಾಲ ಕಳೆಯುವಂತಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಟೋಲ್ ಗೇಟ್ ಉದ್ಯೋಗಿ ಆಗಿದ್ದ ತಾವರಗೇರಾ ಪಟ್ಟಣದ ಲೋಹಿತ್ ಮಲ್ಲಪ್ಪ ಸಿಂಧನೂರ, ಎಂಬ ಯುವಕನು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ಮೃತನ ಕುಟುಂಬಕ್ಕೆ ಸಂಸ್ಥೆ ಯವರು ಯಾವುದೇ ಪರಿಹಾರ ನೀಡಿಲ್ಲವೆಂದು ಆರೋಪಿಸಿ ಸ್ಥಳಿಯ ಸಂಘಟನೆಗಳ ಪದಾಧಿಕಾರಿಗಳು ಪರಿಹಾರ ನೀಡುವಂತೆ ಒತ್ತಾಯಿಸಿ ಟೋಲ್ ವ್ಯವಹಾರವನ್ನು ಬಂದ ಮಾಡಿಸಿ ಮೃತ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ವಿಮೆ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಅರುಣಕುಮಾರ ನಾಲತವಾಡ, ರಾಜ್ಯ ಖಾಸಗಿ ಮತ್ತು ಟ್ಯಾಕ್ಸಿ ವಾಹನಗಳ ಸಂಘದ ಅಧ್ಯಕ್ಷ ರವಿ ತಳಗೇರ, ಶಿವು ಗುರಿಕಾರ, ಚನ್ನಮಲ್ಲಪ್ಪ ಕುಂಬಾರ ವಿರೇಶ, ಸಂತೋಷ ಜಕಾಪುರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ