Thursday , September 19 2024
Breaking News
Home / Breaking News / ಈದ್ ಮಿಲಾದ್ ಹಾಗೂ ವಾಲ್ಮೀಕಿ ಜಯಂತಿಗಳಲ್ಲಿ  ಮೆರವಣಿಗೆ, ದ್ವನಿವರ್ಧಕಗಳ ಬಳಕೆ ನಿಷೇದ…

ಈದ್ ಮಿಲಾದ್ ಹಾಗೂ ವಾಲ್ಮೀಕಿ ಜಯಂತಿಗಳಲ್ಲಿ  ಮೆರವಣಿಗೆ, ದ್ವನಿವರ್ಧಕಗಳ ಬಳಕೆ ನಿಷೇದ…

ವರದಿ : ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಈದ್ ಮಿಲಾದ್ ಹಾಗೂ ವಾಲ್ಮೀಕಿ ಜಯಂತಿಯ ಅಂಗವಾಗಿ ಹಮ್ಮಿಕೊಳ್ಳಲಾಗಿದ ಶಾಂತಿಯಲ್ಲಿ  ದ್ವನಿವರ್ಧಕಗಳ ಬಳಕೆ, ಹಾಗೂ ಸರಕಾರದ ಕರೋನ ನಿಯಮಗಳನ್ನು ಪಾಲಿಸಬೇಕು ಎಂದು ಲಿಂಗಸಗೂರು ಸಿಪಿಐ ಮಹಾಂತೇಶ್ ಸಜ್ಜನ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ  ಅವರು  ಸರಕಾರ ಕೋವಿಡ್-19  ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಈದ್ ಮಿಲಾದ್ ಹಬ್ಬ ಹಾಗೂ ವಾಲ್ಮೀಕಿ ಜಯಂತಿಯನ್ನ  ಅತ್ಯಂತ ಸರಳವಾಗಿ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸತಕ್ಕದ್ದು.ಹಬ್ಬದ ಆಚರಣೆಯಲ್ಲಿ ಸಾಮೂಹಿಕ ಮೆರವಣಿಗೆ ನಿಷೇಧಿಸಿದೆ,  ಪ್ರವಚನ ಕಾರ್ಯಕ್ರಮ/ಸಾಂಸ್ಕೃತಿಕ ಕಾರ್ಯಕ್ರಮ ಸಭೆ ಸಮಾರಂಭಗಳಲ್ಲಿ 100 ಕ್ಕಿಂತ ಹೆಚ್ಚು ಜನರು ಒಮ್ಮೆಲೆ ಸೇರುವಂತಿಲ್ಲ ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು  ಮಸೀದಿಗಳಲ್ಲಿ ಮತ್ತು ದರ್ಗಾಗಳಲ್ಲಿ, ದೇವಸ್ಥಾನಗಳಲ್ಲಿ  ಸಾಮಾಜಿಕ ಅಂತರ ಹಾಗೂ ಕೋವಿಡ್-19ರ ಶಿಷ್ಟಚಾರದೊಂದಿಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ದೈಹಿಕ ಅಂತರ
ಕಾಪಾಡಿಕೊಳ್ಳುವುದರ ಮೂಲಕ  ಈದ್ ಮಿಲಾದ್ ಹಾಗೂ  ಮಹರ್ಷಿ ವಾಲ್ಮೀಕಿ ಜಯಂತಿಯನ್ನು  ಆಚರಿಸತಕ್ಕದ್ದು. ಹಬ್ಬ ಹರಿದಿನಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯೆಗಳು ಉಂಟಾಗಲು ಪೂರಕವಾಗಿರುವುದರಿಂದ ಈದ್ ಮಿಲಾದ್  ಹಾಗೂ ವಾಲ್ಮೀಕಿ ಜಯಂತಿಯನ್ನ  ಆಚರಿಸುವ ಮೂಲಕ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ಮುದಗಲ್ ಜನತೆ ನೋಡಿಕೊಳ್ಳುತ್ತಾರೆ ಎನ್ನುವ ಭರವಸೆ ನನಗಿದೆ ಎಂದರು ಈ ಸಂದರ್ಭದಲ್ಲಿ ಸ್ಥಳೀಯ ಠಾಣೆಯ ಪಿಎಸ್ಐ ಡಾಕೇಶ್ ಯು,
 ಪಟ್ಟಣದ ಹಿರಿಯ ಮುಖಂಡರಾದ ಗುರುಬಸಪ್ಪ ಸಜ್ಜನ್, ಸೈಯದ್ ಯಾಸೀನ್  ಖಾದ್ರಿ,ಕಾಂಗ್ರೆಸ್ ಮುಖಂಡರಾದ   ನೈಮತುಲ್ಲ ಖಾದ್ರಿ, ಮೈಬೂಬ್ ಸಾಬ್ ಬರೀಗಿಡ, ಚಂದ್ರಶೇಖರ್  ನಾಯಕ್, ಕರವೇ ಅಧ್ಯಕ್ಷ  ನಯೀಮ್  ಇನ್ನಿತರರು ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!