ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ನವಲಿ ಗ್ರಾಮದ ಖಾಸಗಿ ಶಾಲಾ ಶಿಕ್ಷಕನೊಬ್ಬ ತಾನು ಪರ ಸ್ತ್ರೀಯ ಜೊತೆಗೆ ಕಾಮದಾಟವಾಡಿದ್ದ ಫೋಟೋವೊಂದನ್ನು ವಾಟ್ಸಾಪ್ ಗ್ರೂಪ್ ಗೆ ಹಾಕುವ ಮೂಲಕ ತನ್ನ ಕಾಮ ಪುರಾಣವನ್ನು ತಾನೇ ಬಟಾ ಬಯಲು ಮಾಡಿರುವ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ..!
ನವಲಿ ಗ್ರಾಮದ ಖಾಸಗಿ ಶಾಲೆವೊಂದರಲ್ಲಿ ಶಿಕ್ಷಕರಾಗಿರುವ ನಿಂಗಪ್ಪ ಎಂಬಾತನೇ ಈ ಪ್ರಸಂಗದ ರೂವಾರಿ. ಪರ ಸ್ತ್ರೀ ಜೊತೆಗೆ ತಾನು ಆಡಿದ ಕಾಮದಾಟದ ಫೋಟೋವೊಂದನ್ನು ಬೈ ಮಿಸ್ಟೇಕ್ ಆಗಿ ‘ನಾಗಪ್ಪ ಸಾಲೋನಿ ಅಭಿಮಾನಿಗಳ ಗ್ರೂಪ್’ ಎಂಬ ಗ್ರೂಪ್ ಗೆ ಶೇರು ಮಾಡಿದ್ದಾನೆ. ಬಳಿಕ ತಾನೇ ಆ ಗ್ರೂಪ್ ನಿಂದನಿಂದ ಲೆಫ್ಟ್ ಆಗಿದ್ದಾನೆ. ಆದರೆ, ಮಹಿಳೆವೊಬ್ಬಳ ಜೊತೆಗೆ ಮಂಚದ ಮೇಲೆ ಮಲಗಿದ ಫೋಟೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಪತ್ನಿಗೆ ಇರಸು ಮುರಸು : ಪತಿಯ ಕಾಮದಾಟದ ಫೋಟೋ ವೈರಲ್ ಆಗಿರುವುದು ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿರುವ ಪತ್ನಿಗೆ ಸಾಕಷ್ಟು ಇರಸು ಮುರುಸು ಆಗಿದೆ. ರಾಜಕೀಯ ಎದುರಾಳಿಗಳಿಗೆ ಇದು ಒಂದು ಅಸ್ತ್ರವಾಗಿದ್ದು ಕೇವಲ ಕನಕಗಿರಿ ಕ್ಷೇತ್ರ ಅಷ್ಟೇ ಅಲ್ಲ ಜಿಲ್ಲೆಯ ತುಂಬೆಲ್ಲಾ ಕಾಮದಾಟದ ಫೋಟೋ ಸಾಕಷ್ಟು ಸುದ್ದಿಯಾಗಿರುವುದಂತು ಸತ್ಯ..!