ವರದಿ ಎನ್ ಶಾಮೀದ್ ತಾವರಗೇರಾ
ತುಮಕೂರು: ರೈತರು ದೇಶದ ಬೆನ್ನೆಲುಬು ಎನ್ನುವ ಸರ್ಕಾರಗಳು, ರೈತರಿಗಾಗಿ ಹಲವಾರು ಯೋಜನೆಗಳನ್ನು ಕೈಗೊಂಡರು ಕೂಡಾ ರೈತಾಪಿ ಯುವಕರಿಗೆ ಹೊಸದೊಂದು ಸಮಸ್ಯೆ ಕಾಡುತ್ತಿದೇ ಅದೇನೆಂದರೆ ರೈತಾಪಿ ಯುವಕರಿಗೆ ಮದುವೆಯಾಗಲು ಹುಡುಗಿಯರು (ವಧು ಗಳು) ಸಿಗುತ್ತಿಲ್ಲವೆಂಬ ಕೊರಗು ಕಾಡುತ್ತಿದೆ. ಇಂತಹ ವಿಚಿತ್ರ ಘಟನೆಯೊಂದು ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಎಂಬ ಕಾರ್ಯಕ್ರಮದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ ಲಕ್ಮಗೊಂಡನಹಳ್ಳಿ ಹಾಗೂ ತಿಪಟೂರು ತಾಲೂಕಿನ ತಿಮ್ಮಾಪುರ ಗ್ರಾಮದ ರೈತಾಪಿ ಯುವಕರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ದಯವಿಟ್ಟು ನಮಗೆ ಮದುವೆ ಮಾಡಿಸಿಕೊಡಿ ಎಂದು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ರೈತಾಪಿ ಯುವಕರನ್ನು ಮದುವೆ ಯಾಗಲು ಯುವತಿಯರು ಹಿಂದೆಟು ಹಾಕುತ್ತಿದ್ದು, ಮದುವೆ ಆಗಲು ಯಾರು ಮುಂದೆ ಬರುತ್ತಿಲ್ಲ ಆದ್ದರಿಂದ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಬಗೆ ಹರಿಸಬೇಕೆಂದು ತುಮಕೂರು ಜಿಲ್ಲಾಧಿಕಾರಿಗಳಾದ ಯಲ್ಲನಗೌಡ ಶಿವನಗೌಡ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ ಘಟನೆ ನಡೆದಿದೆ. ಈ ಮನವಿಯನ್ನು ನೋಡಿದ ಜಿಲ್ಲಾಧಿಕಾರಿಗಳು ಒಂದು ಕ್ಷಣ ಆಶ್ಚರ್ಯಚಕಿತರಾಗಿದ್ದಾರೆ.