ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಕರೊನಾ ಕರಿನೆರಳಲ್ಲಿ ಮಂಕಾಗಿದ್ದ ದಸರಾ ಹಬ್ಬವು ಈ ಬಾರಿ ಡಬಲ್ ಧಮಾಕ್ ನೊಂದಿಗೆ ಅದ್ದೂರಿಯಾಗಿ ಸಾರ್ವಜನಿಕರು ಬನ್ನಿ ಹಬ್ಬವನ್ನು ಆಚರಿಸಿದರು.
ಹಾಲುಗಂಬ ಸ್ಪರ್ಧೆಯಲ್ಲಿ ಪಟ್ಟಣದ ಸಾವಿರಾರು ಜನ ವೆಂಕಟೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಾವಿರಾರು ಜನ ಸೇರಿ ಅತೀ ವಿಜೃಂಭಣೆಯಿಂದ ಹಾಲುಗಂಬ ಎರುವುದನ್ನು ಮನಸಾರೆ ಕಣ್ತುಂಬಿಕೊಂಡರು. ಬನ್ನಿ ಕೊಟ್ಟು ಬಂಗಾರ ದಂಗೆ ಇರೋಣ ಅನ್ನುವದರ ಜೊತೆಜೊತೆಗೆ ಈ ಬಾರಿ ತಾವರಗೇರಾ ಹಾಗೂ ಹೋಬಳಿಯ ಜನರಿಗೆ “ಬಂಗಾರ”ದ ಬೆಲೆ ಸಿಕ್ಕಂತಾಗಿರುವುದು ವಿಶೇಷವಾಗಿದೆ.
ವಿಜಯದಶಮಿಯ ದಿನದಂದು ಪಕ್ಕದ ನಾರಿನಾಳ ಗ್ರಾಮದ ಸೀಮಾದಲ್ಲಿ ಚಿನ್ನದ ಅದಿರು ಪತ್ತೆಯಾಗಿರುವುದು ಜನರಿಗೆ ಬನ್ನಿ ಯ ಜೊತೆಗೆ ಬಂಗಾರ ದೊರೆತಂತಾಗಿರುವುದು. ಸಾರ್ವಜನಿಕರ ಸಂತೋಷಕ್ಕೆ ಕಾರಣವಾಗಿದೆ.
ಹಾಲುಗಂಬ ಸ್ಪರ್ಧೆಯಲ್ಲಿ ಬಚನಾಳದ ಛತ್ರಪ್ಪ ಸಣ್ಣಮರಿಯಪ್ಪ ಕೊಪ್ಪಳದರ ಯುವಕನು ವಿಜೇತನಾಗಿದ್ದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ನೀಡಿದ 11 ತೊಲಿ ಬೆಳ್ಳಿಯ ಕಡಗ ವನ್ನು ಇಲ್ಲಿಯ ಉದ್ಯಮಿ ಬಸನಗೌಡ ಮಾಲಿಪಾಟೀಲ ನೀಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಶಂಭನಗೌಡ ಪಾಟೀಲ್ ಸೇರಿದಂತೆ ಯಾದವ ಸಮುದಾಯದ ಮುಖಂಡರು ಹಾಗೂ ಪಟ್ಟಣದ ಎಲ್ಲಾ ಸಮುದಾಯದ ಮುಖಂಡರು ಉಪಸ್ಥಿತರಿದ್ದರು