ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಬೆಳಗಾವಿ-ಹೈದರಾಬಾದ್ ರಾಜ್ಯ ಹೆದ್ದಾರಿಯ ರಸ್ತೆ ಅಭಿವೃದ್ಧಿಯ ಅಗಲಿಕರಣವನ್ನು ಮುದಗಲ್ ಪಟ್ಟಣದಲ್ಲಿ ರಸ್ತೆ ಮಧ್ಯೆದಿಂದ 48 ಫೀಟ್‌ಗೆ ಇಳಿಕೆ ಹಾಗೂ ಕರುನಾಡ ವಿಜಯಸೇನೆ ಸಂಘಟನೆಯ ನಿರಾಶ್ರಿತರಿಗೆ ಆಶ್ರಯ ಕುರಿತು ಸಲ್ಲಿಸಿದ ಮನವಿಗೆ ಸಭೆಯಲ್ಲಿ ಚರ್ಚಿಸಿ ಆಶ್ರಯಯೋಜನೆಗಳಲ್ಲಿ ಮನೆ ನೀಡಬೇಕು ಎಂದು ಶಾಸಕ ಹಾಗೂ ಪುರಸಭೆ ಸದಸ್ಯರು ಒಪ್ಪಿಗೆ ಸೂಚಿದರು. ಪುರಸಭೆಯಲ್ಲಿ ಜರುಗಿದ ವಿಶೇಷ ಸಾಮಾನ್ಯ ಸಭೆಯ ಲಿಂಗಸುಗೂರು ಶಾಸಕ ಡಿ.ಎಸ್. ಹೂಲಗೇರಿ ಹಾಗೂ ಪುರಸಭೆ ಅಧ್ಯಕ್ಷೆ ಅಮೀನಾಬೇಗಂ ಮೈಹಿಬೂಬಸಾಬ ಬಾರಿಗಿಡ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಮಧ್ಯದಿಂದ 50 ಫೀಟ್‌ಗೆ ರಸ್ತೆ ನಿರ್ಮಿಸಬೇಕು. ಈ ಹಿಂದೆ ರಸ್ತೆಯಲ್ಲಿ ಅಕ್ರಮವಾಗಿ ನಿರ್ಮೀಸಿದ ಮನೆಗಳು 50 ಫೀಟ್‌ಗೆ ತೆರವು ಗೊಳಿಸಿದ್ದರಿ. ಆದರೆ ಈಗ ಕಡಿಮೆ ಮಾಡುವುದು ಸರಿಯಲ್ಲ. ಬಡವರ ಮನೆಗಳನ್ನು 50 ಫೀಟ್‌ಗೆ ತೆರವುಗೊಳಿಸಿ ಸ್ಥಿತಿವಂತರ ಕಟ್ಟಡಗಳು ಬಂದರೆ ಕಡಿಮೆ ಮಾಡಿರುವುದು ಏಕೆ ಎಂದು ಜೆಡಿಎಸ್ ಸದಸ್ಯ ಶೇಖ ರಸೂಲ್ ಪ್ರಶ್ನಿಸಿದರು. 50 ಫೀಟ್‌ಗೆ ರಸ್ತೆ ನಿರ್ಮಾಣ ಮಾಡಬೇಕೆಂದು ಪಟ್ಟು ಹಿಡಿದು. ನಂತರ ಶಾಸಕ ಡಿ.ಎಸ್. ಹೂಲಗೇರಿ ಮಾತನಾಡಿದ ಕಟ್ಟಡದ ಕಾಲಂಗಳು ಬಂದರೆ 2 ಫೀಟ್ ರಿಯಾಯಿತಿ ನೀಡೊಣ, ಅದಕಿಂತ ಮೇಲು ಬಂದರೆ ಎಲ್ಲಾ ಕಟ್ಟಡಗಳು ಹೊಡೆದು ರಸ್ತೆ ನಿಮಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ರಸ್ತೆ ಅಭಿವೃದ್ಧಿಯ ವಿಸ್ತೀರ್ಣದಲ್ಲಿ ಶಾಸಕ ಹಾಗೂ pwd ಎಂಜಿನಿಯರಲ್ಲಿ ಗೊಂದಲ ಉಂಟಾಯಿತು. ಶಾಸಕರ ಒಂದು ಪ್ಯಾಕೇಜ್ 850 ಮೀಟರ್ ಎಂದರೆ pwd ಎಂಜಿನಿಯ 610 ಮೀಟರ್ ಎಂದು ಹೇಳಿದರು. ನಂತರ ಸಮಜಾಯಿಸಿ ಉತ್ತರ ನೀಡಿದ pwd ಎಂಜಿನಿಯರ್ 610 ಮೀಟರ್ ಚರಂಡಿ ಹೊಂದಿದೆ. ಇನ್ನೂ 600 ಮೀಟರ್ ಚರಂಡಿ ಇಲ್ಲದೇ ರಸ್ತೆ ನಿರ್ಮಾಣವಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಂದಾಜು ಪತ್ರಿಕೆ ನೀಡಲು ಹಿಂದೇಟು : ಎಂಜಿನಿಯರಗಳು ಪುರಸಭೆ ಸದಸ್ಯರಿಗೆ, ಮಾಧ್ಯಮದವರಿಗೆ, ಪಟ್ಟಣದ ನಿವಾಸಿಗಳಿಗೆ ರಸ್ತೆ ಅಭಿವೃದ್ಧಿಯ ಅಂದಾಜು ಪತ್ರಿಕೆ ನೀಡಲು ಹಿಂದೇಟು ಹಾಕಿದರು. ಶಾಸಕರೆ ಅಂದಾಜು ಪತ್ರಿಕೆ ಕೇಳಿದರೆ ನಾಕಾಶೆ ತೊರಿಸಿ ಇದೆ ಅಂದಾಜು ಪತ್ರಿಕೆ ಎಂದು ತಪ್ಪು ಮಾಹಿತಿ ನೀಡಲು ಮುಂದಾದಗ ಪತ್ರಕರ್ತರು ಇದು ಅಂದಾಜು ಪತ್ರಿಕೆ ಅಲ್ಲ. ಒಂದು ಪುಟದಲ್ಲಿ ಅಂದಾಜು ಪತ್ರಿಕೆ ಇರುವುದಿಲ್ಲ. ಎಂದು ಹೇಳಿದಾಗ ಬೇರೆ ಇದೆ. ನೀಡುತ್ತೇನೆ ಎಂದು ಒಪ್ಪಿಕೊಂಡರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಅಮೀನ ಬೇಗಂ ಬಾರಿಗಿಡ, ಉಪಾಧ್ಯಕ್ಷ ಶಿವನಾಗಪ್ಪ ಬಡಕುರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಬ್ಬೀರ್, ಮುಖ್ಯಾಧಿಕಾರಿ ಮರಿಲಿಂಗಪ್ಪ ಹಾಗೂ ಪುರಸಭೆ ಸದಸ್ಯರು ಇದ್ದರು.