ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ವಿಧಾನಸೌದದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮುದುಗಲ್ ಪಟ್ಟಣದಲ್ಲಿ ನೂತನ ಬಸ್ ಡಿಫೋ ಮಂಜೂರು ಮಾಡುವಂತೆ ಒತ್ತಾಯಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಶ್ರೀರಾಮುಲು
ಮುದಗಲ್ ಪಟ್ಟಣ ಕೇಂದ್ರವಾಗಿರುವುದರಿಂದ ನಿಯಮಗಳ ಪ್ರಕಾರ ಘಟಕದ ಸ್ಥಾಪನೆಗೆ ಅವಕಾಶವಿಲ್ಲ ಪಟ್ಟಣದಲ್ಲಿ ಈಗಾಗಲೇ 251ಬಸ್ ಗಳು ಸಂಚಾರ ಮಾಡುತ್ತಿದ್ದು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ವ್ಯವಸ್ಥೆ ಮಾಡುತ್ತೇವೆ ಮುಂದಿನ ದಿನಗಳಲ್ಲಿ ಮುದಗಲ್ ಪಟ್ಟಣಕ್ಕೆ ಬಸ್ ಡಿಪೋ ಮಂಜೂರು ಮಾಡುವುದಾಗಿ ಸದನದಲ್ಲಿ ಭರವಸೆ ನೀಡಿದರು.