ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಸ್ಥಳೀಯ ರಾಯನಕೆರೆಯ ಶಾಶ್ವತ ದುರಸ್ತಿಗಾಗಿ ಬೇಸಿಗೆ ಆರಂಭ ಕ್ಕೂ ಮುಂಚೆ 1 ಕೋಟಿ ರೂಪಾಯಿ ಮಂಜೂರು ಮಾಡಿಸುವದಾಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು. ಅವರು ಶನಿವಾರದಂದು ಇಲ್ಲಿಯ ರಾಯನಕೆರೆಯ ಹೊಡ್ಡಿನ, ಬೊಂಗಾ ಬಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಮಾತನಾಡಿ, ಪಟ್ಟಣಕ್ಕೆ ವರದಾನ ವಾಗಿರುವ ರಾಯನಕೆರೆಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಕೈಗೊಂಡಿದ್ದರಿಂದ ಹೆಚ್ಚಿನ ನೀರು ಸಂಗ್ರಹವಾಗಿರುವುದು ಸಾರ್ವಜನಿಕರ ಶ್ಲಾಘನೀಯ ಕೆಲಸ ವಾಗಿದ್ದು ಅದನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಆಗಿದ್ದು ಈ ನಿಟ್ಟಿನಲ್ಲಿ ಸೋಮವಾರ ದಂದು ಸಣ್ಣ ನೀರಾವರಿ ಸಚಿವರಾದ ಜೆ ಸಿ ಮಾಧುಸ್ವಾಮಿ ಅವರನ್ನು ಭೇಟಿ ಯಾಗಿ ಚರ್ಚಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಅಶೋಕ ಬಳ್ಳೊಳ್ಳಿ, ಮುಖಂಡರಾದ ವೀರನಗೌಡ ಪಾಟೀಲ್, ಅಮರೇಶ ಗಾಂಜಿ, ವಿರೇಶ ತಾಳಿಕೋಟಿ, ಅಂಬಣ್ಣ ಸರನಾಡಗೌಡರ, ಮೆಹೆಬೂಬ ಬಿಸ್ತಿ, ವಿರುಪಣ್ಣ ನಾಲತವಾಡ, ಚೆನ್ನಪ್ಪ ನಾಲತವಾಡ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.