Thursday , September 19 2024
Breaking News
Home / Breaking News / ಡಿಜಿಟಲ್ ಗ್ರಂಥಾಲಯಕ್ಕೆ ಆರಂಭ ಭಾಗ್ಯ…

ಡಿಜಿಟಲ್ ಗ್ರಂಥಾಲಯಕ್ಕೆ ಆರಂಭ ಭಾಗ್ಯ…

ವರದಿ : ನಾಗರಾಜ್ ಎಸ್ ಮಡಿವಾಳರ

ಮುದಗಲ್: ಪಟ್ಟಣದ ಸಾರ್ವಜನಿಕ ಡಿಜಿಟೆಲ್ ಗ್ರಂಥಾಲಯ ಸೋಮವಾರ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗುತ್ತಿದೆ.

ಪಟ್ಟಣದ ಅಶೋಕಗೌಡ ಕಾಂಪ್ಲೆಕ್ಸ್ ಹತ್ತಿರ 40 ಮತ್ತು 80 ನಿವೇಶನದಲ್ಲಿ ಕೆಕೆಆರ್‌ಡಿಬಿ ಯೋಜನೆ ₹ 1 ಕೋಟಿ ಅನುದಾನದಲ್ಲಿ ನಿರ್ಮಾಣವಾಗಿದೆ. ಈ ಗ್ರಂಥಾಲಯಕ್ಕೆ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲಾಗಿದೆ.  ಜೊತೆಗೆ ಕನ್ನಡ ಸಾಹಿತ್ಯ ಕೋಶ, ಕನ್ನಡ ಸಾಹಿತ್ಯ ಸಂಗಾತಿ, ಸಾಧನಾ, ಚಾಣಕ್ಯ ಕಣಜ, ಸ್ಫರ್ಧಾಸ್ಪೂರ್ತಿ, ಸ್ಪರ್ಧಾ ವಿಜೇತ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ಪುಸ್ತಕಗಳ ದೊಡ್ಡ ಸಂಗ್ರಹವೇ ಇಲ್ಲಿದೆ.


ಗ್ರಂಥಾಲಯದಲ್ಲಿ ವಿವಿಧ ವಿಷಯಗಳ 19 ಸಾವಿರ ಪುಸ್ತಕಗಳು ಲಭ್ಯ ಇವೆ. ಇದು ಅಲ್ಲದೇ ಇ- ಗ್ರಂಥಾಲಯ ಸೌಲಭ್ಯ ದೊರೆತ್ತಿದ್ದರಿಂದ 1 ಲಕ್ಷಕ್ಕೂ ಅಧಿಕ ಗ್ರಂಥಗಳ ಸೌಲಭ್ಯ ದೊರೆಯಲಿದೆ. ಈ ಸೌಲಭ್ಯ ಇರುವ ಗ್ರಂಥಾಲಯ ಸೋಮವಾರ ಉದ್ಘಾಟನೆಗೊಳ್ಳಲಿದೆ.
ಗ್ರಂಥಾಲಯದಲ್ಲಿ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನ, ಇತಿಹಾಸ, ನವೋದಯ/ಮೊರಾರ್ಜಿ, ವಿಜ್ಞಾನ-ತಂತ್ರಜ್ಞಾನ, ಕಂಪ್ಯೂಟರ್, ಮಾನಸಿಕ ಸಾಮರ್ಥ್ಯ ಸೇರಿದಂತೆ ಹಲವು ವಿಷಯಗಳ ಪುಸ್ತಕಗಳಿವೆ.
ಪಟ್ಟಣದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. 10 ಸಾವಿಕ್ಕೂ ಹೆಚ್ಚು ಪದವೀಧರರಿದ್ದಾರೆ.
‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಬಡ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಕೊಂಡು ಓದುವ ಸಾಮರ್ಥ್ಯವಿಲ್ಲದ ವಿದ್ಯಾರ್ಥಿಗಳಿಗೆ ಇದು ವರದಾನವಾಗಿದೆ. ಇಲ್ಲಿನ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಈ ಗ್ರಂಥಾಲಯವನ್ನು ಗುಣಮಟ್ಟ ಅಧ್ಯಯನ ಕೇಂದ್ರವನ್ನಾಗಿ ಮಾಡಬೇಕೆಂದು ಓದುಗ ಗುರುಬಸಪ್ಪ ಸಜ್ಜನ ಒತ್ತಾಯಿಸಿದರು.
ಗ್ರಂಥಾಲಯದಲ್ಲಿ 7 ಕಂಪ್ಯೂಟರ್‌ ಗಳಿಗೆ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯಗಳ ನೋಟ್ಸ್ ಡೌನ್ ಲೋಡ್ ಮಾಡಿಕೊಂಡು ಪ್ರಿಂಟ್ ತಗೆದುಕೊಳ್ಳಬಹುದು. ಇದು ಅಲ್ಲದೆ ತಮಗೆ ಬೇಕಾದ ಪುಸ್ತಕಗಳು ಉಚಿತವಾಗಿ ಝೆರಾಕ್ಸ್‌ ಪಡೆಯುವ ಸೌಲಭ್ಯ ಕಲ್ಪಿಸಲಾಗಿದೆ.
ಹಳೆಯ ಗ್ರಂಥಾಲಯದ ಕಟ್ಟಡಲ್ಲಿ ಕೆಲ ಪುಸ್ತಕಗಳು ಇಡಲು ಸ್ಥಳಾವಕಾಶ ಇಲ್ಲದೆ ಕೆಲ ಪುಸ್ತಕಗಳು ಪ್ರದರ್ಶನಕ್ಕೆ ಇಡದೆ ಚೀಲದಲ್ಲಿ ಕಟ್ಟಿ ಇಡಲಾಗಿತ್ತು. ಈಗ ಎಲ್ಲಾ ಪುಸ್ತಕಗಳು ದೊರೆಯುವುದರಿಂದ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!