ವರದಿ ಎನ್ ಶಾಮೀದ್ ತಾವರಗೇರಾ
ಪಂಚ್ ಪುರಿ: ಪ್ರೀತಿ ಕುರುಡು ಎನ್ನುವದಕ್ಕೆ ಘಟನೆಯೊಂದು ಸಾಕ್ಷಿಯಾಗಿರುವುದು ಪಂಜಾಬ್ ಹರಿಯಾಣ ಗಡಿ ಭಾಗದ ಪಂಚ್ ಪುರಿ ಗ್ರಾಮದಲ್ಲಿ ನಡೆದಿದ್ದು, 67 ವರ್ಷದ ಮುದುಕನೊಬ್ಬ 19 ವರ್ಷದ ವಧುವಿನ ಜೊತೆಗೆ ಮದುವೆಯಾಗಿದ್ದಾನೆ.
19 ವರ್ಷದ ವಧುವಿಗೆ 7 ಮಕ್ಕಳ ತಂದೆಯಾಗಿರುವ 67 ವರ್ಷದ ಮುದುಕನ ನಡುವೆ ಪ್ರೇಮಾಂಕುರವಾಗಿದೆ, ಅದೂ ಕೂಡ ಭೂ ಜಮೀನಿಗೆ ಸಂಬಂಧಿಸಿದ ವಿಷಯದಲ್ಲಿ ನ್ಯಾಯ ಪಂಚಾಯಿತಿ ನಡೆದಿದ್ದು ಯುವತಿಯ ಕುಟುಂಬಕ್ಕೆ ಮುದುಕನು ಸಹಾಯ ಮಾಡಲು ಬರುತ್ತಿದ್ದನು ಈ ಸಮಯದಲ್ಲಿ ಇಬ್ಬರಿಗೆ ಪರಸ್ಪರ ಪರಿಚಯವಾಗಿ ಕ್ರಮೇಣ ಪ್ರೇಮಕ್ಕೆ ತಿರುಗಿದೆ.
ನಾಲ್ಕು ವರ್ಷಗಳ ಹಿಂದೆ ಮುದುಕನ ಪತ್ನಿ ಮೃತಪಟ್ಟಿದ್ದರಿಂದ ಮತ್ತೊಂದು ಮದುವೆಯಾಗಲು ಮುದುಕ ಯೋಚಿಸಿದ್ದ ಈ ಸಂದರ್ಭದಲ್ಲಿ ಅಜ್ಜನ ಪ್ರೇಮ ಪಾಶದಲ್ಲಿ ಸಿಲುಕಿದ ಯುವತಿಯು ಕೂಡ ಗಂಡನಿಗೆ ಕೈಕೊಟ್ಟು, ಮುದುಕನನ್ನು ಮದುವೆಯಾಗಿದ್ದಾಳೆ,
ಇವರಿಬ್ಬರ ವಿರುದ್ದ ಯುವತಿಯ ಕುಟುಂಬಸ್ಥರು ಮುದುಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಇದರಿಂದ ಮುದುಕನು ನನ್ನ ಪತ್ನಿಗೆ ಕುಟುಂಬಸ್ಥರಿಂದ ಜೀವ ಬೆದರಿಕೆ ಇದೆಯೆಂದು ಪಂಜಾಬ್ ಹರಿಯಾಣ ಕೊರ್ಟಗೆ ರಕ್ಷಣಾ ಅರ್ಜಿ ಸಲ್ಲಿಸಿದ್ದಾನೆ.
ಅರ್ಜಿಯನ್ನು ಗಮನಿಸಿದ ಅಲ್ಲಿಯ ಕೊಟ್೯ ನ ಮುಖ್ಯ ನ್ಯಾಯಾಧೀಶ ರು ಕಕ್ಕಾ ಬಿಕ್ಕಿಯಾಗಿದ್ದಾರೆ. ಅಷ್ಟೆ ಅಲ್ಲದೆ ಮದುವೆ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ ನಂತರ ತನಿಖೆ ವಿಚಾರಣೆ ವೇಳೆ ಇಬ್ಬರು ಪ್ರಿತಿಸಿ ಮದುವೆಯಾಗಿರುವುದಾಗಿ ತಿಳಿದು ಬಂದಿದೆ. ಎರಡು ಕುಟುಂಬದವರು ಇವರಿಬ್ಬರ ಮನವೊಲಿಸಲು ಯತ್ನಿಸಿದರು ಕೂಡ ಮುದುಕನ್ನು ಬಿಟ್ಟಿರಲು ಯುವತಿ ಒಪ್ಪುತ್ತಿಲ್ಲ ಅತ್ತ ಯವತಿಯನ್ನು ಬಿಟ್ಟಿರಲು ಮುದುಕ ಕೂಡ ತಯಾರಿಲ್ಲ.
ಈ ಪ್ರಕರಣದ ಬಗ್ಗೆ ಪೊಲೀಸರಿಗೆ ಕೂಡ ಸಂಕಷ್ಟಕ್ಕೆ ಸಿಲುಕಿ ಮತ್ತೊಮ್ಮೆ ಕೊಟ್೯ ಮೊರೆಹೊಗಿದ್ದಾರೆ. ಈ ಪ್ರಕರಣ ಈಗ ಚರ್ಚೆಗೆ ಗ್ರಾಸವಾಗಿದ್ದು ಮೊಮ್ಮಕ್ಕಳೊಂದಿಗೆ ಆಟವಾಡ ಬೇಕಾಗಿದ್ದ ಮುದುಕ 19 ರ ಹುಡುಗಿಯನ್ನು ಮದುವೆ ಆಗಿ ಸುದ್ದಿಯಾಗಿದ್ದಾನೆ.