ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಮೊಹರಂ ಹಬ್ಬವನ್ನು ಶಾಂತಯುತವಾಗಿ ಮತ್ತು ಸೌರ್ಹದತೆಯಿಂದ ಕೊವೀಡ್-೧೯ ನ ಸರ್ಕಾರದ ಸೂಚನೆಯಂತೆ ಆಚರಣೆ ಆಡಬೇಕು ಎಂದು ಮುಖಂಡ ಬಸನಗೌಡ ಮಾಲಿಪಾಟೀಲ್ ಹೇಳಿದರು.
ಪಟ್ಟಣದಲ್ಲಿ ಮೊಹರಂ ಹಬ್ಬದ ಪೂರ್ವಭಾವಿ ಪಾಲ್ಗೊಂಡು ಮಾತನಾಡಿದ ಅವರು, ಯಾರೂ ಸಹ ಹಲಗೆ, ಶೇನಾಯಿ ಬಾರಿಸವಂತ್ತಿಲ್ಲ, ಹೆಜ್ಜೆ ಹಾಡುವಂತ್ತಿಲ್ಲ, ದೇವರನ್ನು ಸವಾರಿ ಗೆ ಏಬ್ಬಿಸುವಂತ್ತಿಲ್ಲ. ಕೊವೀಡ್ -೧೯ ನ ಸರ್ಕಾರದ ಮಾರ್ಗ ಸೂಚನೆಯಂತೆ ಅತ್ಯಂತ ಸರಳವಾಗಿ ಆಚರಣೆ ಮಾಡಬೇಕು. ಯಾರೂ ಸಹ ಗುಂಪು ಗುಂಪಾಗಿ ಸೇರುವಂತ್ತಿಲ್ಲ. ಅಲಾಯಿ ದೇವರಿಗೆ ಸಕ್ಕರಿ ಓದಿಸಲು ಹೋಗುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು, ಸಾನಿಟೈಜರ್ ಬಳಿಕೆ ಮಾಡಬೇಕು, ಸರ್ಕಾರದ ಆದೇಶವನ್ನು ಯಾರೂ ಮೀರಬಾರದು ಎಂದರು.
ಸಭೆಯಲ್ಲಿ ಸೈಹದ್ ಹುಸೇನ ಮುಜಾವರ್, ಗೇಸುದರಾಜ್ ಮುಜಾವರ್, ಶ್ಯಾಮೀದ್ ಸಾಬ ಮುಜಾವರ್, ಕಲೀಂ ಮುಜಾವರ, ನಾರಾಯಣಪ್ಪ ಮಡಿವಾಳರ, ಶರಣಪ್ಪ ದುಮತಿ, ಶ್ಯಾಮ್ ಸಿಂಗ್ ಬಳ್ಳಾರಿ, ಶ್ಯಾಮೀದ್ ಸಾಬ ನಾಡಗೌಡ, ಅಜೀಮ್ ಸಾಬ ಖಾಜಿ, ಅಮರೇಶ ಗಾಂಜಿ, ಮೈನು ಸೇರಿದಂತೆ ಸರ್ವಧರ್ಮದ ಮುಖಂಡರು ಹಾಗೂ ಗಣ್ಯರು ಇದ್ದರು.