ವರದಿ ಎನ್ ಶಾಮೀದ್ ತಾವರಗೇರಾ
ಗಂಗಾವತಿ: ಮೊಟ್ಟೆ ಡೀಲ್ ಪ್ರಕರಣದಲ್ಲಿ ಭಾಗಿಯಾದ ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಅವರು, ಶಾಸಕರಾಗಿಯು ನಾನು ಅವರ ಪಿಎ ಎಂದು ದೂರವಾಣಿ ಕರೆಯಲ್ಲಿ ಹೇಳಿಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಯಕ್ಷ ಪ್ರಶ್ನೆ ಯಾಗಿದೆ.
ಮೊಟ್ಟೆ ಡೀಲ್ ಪ್ರಕರಣದಲ್ಲಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆಯವರೊಂದಿಗಿನ ಸಂಭಾಷಣೆಯ ಸ್ಟ್ರೀಂಗ್ ಆಪರೇಶನ್ ನಲ್ಲಿ ಸಿಕ್ಕಿ ಹಾಕಿಕೊಂಡಿರುವ ವಿಡಿಯೋ ಎಲ್ಲಾ ಕಡೇ ವೈರಲ್ಲಾಗಿದ್ದು, ಈಗ ಶಾಸಕ ಪರಣ್ಣ ಮನವಳ್ಳಿ ಅದರ ಬಗ್ಗೆ ಪ್ರತಿಕ್ರಿಯೆ ನೀಡಲು ಹೋಗಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೇ.
ಈಗಾಗಲೇ ಶಾಸಕ ಪರಣ್ಣ ಮನವಳ್ಳಿ ವಿರುದ್ದ ಕೆಲ ರೈತ ಸಂಘಟನೆಯ ಮುಖಂಡರು ಎಸಿಬಿ ಸೇರಿದಂತೆ ಸಂಭಂದಿಸಿದ ಇಲಾಖೆಯ ಮುಖ್ಯಸ್ಥರಿಗೆ ದೂರು ಸಲ್ಲಿಸಿದ್ದಾರೆ.