ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಸಮೀಪದ ನಂದಾಪುರ ಗ್ರಾಮದ ದಲಿತರ ಭೂ ಕಬಳಿಕೆ ಪ್ರಕರಣ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಜರುಗಿದ ದಲಿತರ ಸಭೆಯಲ್ಲಿ ಮತ್ತೆ ಬೆಳಕಿಗೆ ಬಂದಿತು.
ಡಿವೈಎಸ್ ಪಿ ಆರ್ ಎಸ್ ಉಜ್ಜನಕೊಪ್ಪ ಅವರ ನೇತೃತ್ವದಲ್ಲಿ ಜರುಗಿದ ದಲಿತರ ಸಭೆಯಲ್ಲಿ ದಲಿತ ಮುಖಂಡ ಹೇಮರಾಜ ವಿರಾಪೂರ ಪ್ರಕರಣ ಬೆಳಕಿಗೆ ತಂದರು.
ನಂದಾಪೂರ ಗ್ರಾಮದ 48 ದಲಿತ ಕುಟುಂಬಗಳಿಗೆ ಸೇರಬೇಕಾಗಿದ್ದ ಸರ್ವೆ ನಂಬರ 335, 340 ಸೇರಿದಂತೆ ಇನ್ನಿತರ ಜಮೀನುಗಳು ಉಳ್ಳವರ ಪಾಲಾಗಿವೆ, ಜಮೀನುಗಳಿಗೆ ಸಂಭಂದಿಸಿದ ಖಾಸ್ರಾ ಪಹಣಿಗಳನ್ನು ತಿದ್ದುಪಡಿಮಾಡಲಾಗಿದೆ.
ಈ ಪ್ರಕರಣದಲ್ಲಿ ದಲಿತ ಕುಟುಂಬಗಳಿಗೆ ಅನ್ಯಾಯವಾಗಿದೆ ಜಮೀನುಗಳಿಗೆ ಸಂಭಂದಿಸಿದ ಕಾಗದ ಪತ್ರಗಳನ್ನು ಅಧಿಕಾರಿಗಳು ಶಾಮಿಲಾಗಿ ಪರಬಾರಿ ಮಾಡಲಾಗಿದೆ ಎಂದು ಹೇಮರಾಜ ಸಭೆಯಲ್ಲಿ ತಿಳಿಸಿದರು.
ದಲಿತರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಿದ್ದನ್ನು ಖುಲಾಸೆ ಗೊಳಿಸಬೇಕು ಎಂದು ಮುಖಂಡ ಆನಂದ ಭಂಡಾರಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹುಸೇನಪ್ಪ ಮುದೇನೂರ, ನಾಗರಾಜ ನಂದಾಪೂರ, ಸಂಜೀವ ಚಲುವಾದಿ, ಪರಶುರಾಮ ಭೋವಿ, ಸೇರಿದಂತೆ ಸ್ಥಳೀಯ ಹಾಗೂ ಗ್ರಾಮೀಣ ಭಾಗದ ದಲಿತ ಮುಖಂಡರು ಉಪಸ್ಥಿತರಿದ್ದರು.
ಪ್ರಭಾರ ಪಿಎಸ್ಐ ಮಲ್ಲಪ್ಪ ವಜ್ರದ ಸ್ವಾಗತಿಸಿದರು, ಬಸವರಾಜ ಇಂಗಳದಾಳ ನಿರೂಪಿಸಿದರು, ಗುಂಡಪ್ಪ ವಂದಿಸಿದರು.