ವರದಿ : ನಾಗರಾಜ್ ಎಸ್ ಮಡಿವಾಳರ್
ಮಳವಳ್ಳಿ: ಹಲಗೂರು ಪಟ್ಟಣದ ಮೋದಿ ಕಛೇರಿಯಲ್ಲಿ ಶನಿವಾರ ಹಿಂದೂ ಧರ್ಮದಾಯ ಹಾಗೂ ಧಾರ್ಮಿಕ ಧತ್ತಿ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ನಗರ ಜಿಲ್ಲೆಯ ನಿರ್ದೇಶಕರಾದ ಶ್ರೀ ಹರ್ಷ ಮುತಾಲಿಕ್ ರವರಿಗೆ ಮೋದಿ ತಂಡದ ಸದಸ್ಯರು ಸನ್ಮಾನಿಸಿ ಹಲಗೂರು ಪಟ್ಟಣದ ಸುತ್ತ ಮುತ್ತ ಇರುವ ದೇವಾಲಯಗಳ ಅಭಿವೃದ್ಧಿ ಪಡಿಸಲು ಮನವಿ ಮಾಡಿದರು ನಂತರ ಹಲಗೂರು ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಾಲಯ, ಗೊಲ್ಲರಹಳ್ಳಿ ಶ್ರೀ ರಾಮ ದೇವಾಲಯ, ಮುತ್ತತಿಯ ಶ್ರೀ ಮುತ್ತತಿರಾಯ ಸ್ವಾಮಿ ದೇವಾಲಯ, ಶ್ರೀ ಭೀಮಲಿಂಗೇಶ್ವರ ದೇವಾಲಯ, ಬಸವನಹಳ್ಳಿಯ ಬೆಟ್ಟದ ಶ್ರೀ ಬಸವೇಶ್ವರಸ್ವಾಮಿ, ತಾಳವಾಡಿ ಹಲಗೂರು ಹೋಬಳಿ ಶ್ರೀ ಆಂಜನೇಯ ಮತ್ತು ಶ್ರೀ ಪಾಂಡುರಂಗ ದೇವಸ್ಥಾನಗಳಿಗೆ ಭೇಟಿ ನೀಡಿ ಅಲ್ಲಿನ ದೇವಾಲಯ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದು ದೇವಾಲಯಗಳ ಅಭಿವೃದ್ಧಿ ಯೋಜನೆ ಹಾಗೂ ಮೂಲ ಸೌಕರ್ಯಗಳಾದ ಸಿ ಸಿ ಕ್ಯಾಮರಾ, ಭಕ್ತರ ವಸತಿ ನಿಲಯ, ಶೌಚಾಲಯ, ಕುಡಿಯುವ ನೀರಿನ ಸರಬರಾಜು ಮಾಡುವ ವ್ಯವಸ್ಥೆ ಮುಂತಾದ ಅನೇಕ ವಿಷಯಗಳ ಬಗ್ಗೆ ದೇವಸ್ಥಾನದ ಅರ್ಚಕರ ಜೊತೆ ಚರ್ಚೆ ಮಾಡಿ ಸಮಸ್ಯೆಗಳಿಗೆ ಆದಷ್ಟೂ ಬೇಗ ಪರಿಹಾರವನ್ನು ಸರ್ಕಾರದ ವತಿಯಿಂದ ಒದಗಿಸುವ ವ್ಯವಸ್ಥೆ ಮಾಡುವೆ ಎಂದು ಭೇಟಿ ವೇಳೆ ತಿಳಿಸಿದರು.
ಮುತ್ತತಿಯ ಅರಣ್ಯ ಪ್ರದೇಶದಲ್ಲಿರುವ ವಾನರ(ಕೋತಿ)ಗಳಿಗೆ, ವರಾಹ (ಕಾಡು ಹಂದಿ)ಗಳಗೆ ಬಾಳೆಹಣ್ಣು ಚುರುಮರಿ(ಮಂಡಕ್ಕಿ) ಹಾಗೂ ಹಸುಗಳಿಗೆ ಬಾಳೆಹಣ್ಣು ಅರ್ಪಿಸುವ ಮೂಲಕ ತಮ್ಮ ವನ್ಯಜೀವಿಗಳ ಹಾಗೂ ಮೂಕ ಪ್ರಾಣಿಗಳ ಕಾಳಜಿ ಯನ್ನು ವ್ಯಕ್ತಪಡಿಸಿದರು ಇ ಸಂಧರ್ಭದಲ್ಲಿ ಹಲಗೂರಿನ ಮೋದಿ ರವಿ,ಅಭಿಷೇಕ್ ವಕೀಲರು, ಗಂಗಾಧರ ಆರ್,ಅವಿನಾಶ್ ಬ್ಯಾಡರಹಳ್ಳಿ,ಮಹಾದೇವಸ್ವಾಮಿ, ಎನ್ ಕೆ ಕುಮಾರ್, ನಾಗೇಶ ಗೊಲ್ಲರಹಳ್ಳಿ,ಶಿವಣ್ಣ ಬ್ಯಾಡರಹಳ್ಳಿ,ವಿರೇಶ ಪಂಚಾಯತಿ ಸದಸ್ಯರು,ಎಚ್ ಕೆ ಮೂರ್ತಿ ಪಂಚಾಯತಿ ಸದಸ್ಯರು, ಮಹೇಶ್ ಕೊನ್ನಾಪುರ,ಗಂಗಾಧರ ಲಿಂಗಪಟ್ಟಣ,ಕುಮಾರ್ ಗುಂಡಾಪುರ,ಜಿತೇಂದ್ರ ಕುಮಾರ್, ಅಮರೇಶ ಮಡಿವಾಳರ್, ಲಕ್ಷ್ಮಣ, ಗಿರೀಶ್ ಮುತಾಲಿಕ್, ಶ್ರೀ ಹರಿಭಟ್,ಹೇಮಂತ,ಲಿಕಿತ್ ಸೇರಿದಂತೆ ಅನೇಕ ಇದ್ದರು.