ವರದಿ : ನಾಗರಾಜ್ ಎಸ್ ಮಡಿವಾಳರ್
ಲಿಂಗಸುಗೂರು : ಕಣ್ಣು ತೆರೆಯುವ ಮೊದಲೇ ಹೆತ್ತ ಕರುಳ ಬಳ್ಳಿಯನ್ನೇ ತಿಪ್ಪೆಗೆ ಎಸೆದು ಹೋಗುವ ಕಟುಕ ಹೃದಯದ ತಾಯಂದಿರು ಇದ್ದಾರೆ!
ಒಂಬತ್ತು ತಿಂಗಳು ಹೊತ್ತು, ಬಳಿಕ ಹೆತ್ತು ಅದೇ
ಮಗುವನ್ನು ಪಾಪಿ ತಾಯಿಯೊಬ್ಬಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಪಕ್ಕದ ತಿಪ್ಪೆಗೆ ಎಸೆದು ಹೋದ ಮನಕಲಕುವ ಹೃದಯ ವಿದ್ರಾವಕ ಘಟನೆ ನಡೆದಿದೆ. ತಿಪ್ಪೆಯಲ್ಲಿ ಹಸುಗೂಸನ್ನು ನಾಯಿಗಳು ಹರಿದು ತಿಂದಿರುವ ರೀತಿ
ಕಾಣುತ್ತಿದೆ. ಘಟನಾ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.