ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ ಎನ್ ಶಾಮೀದ್ ತಾವರಗೇರಾ
ಬೆಂಗಳೂರು: ಸೋಮವಾರದಿಂದ ರಾಜ್ಯದಾದ್ಯಂತ 3.0 ಅನಲಾಕ್ ಜಾರಿಗೊಳಿಸಲಾಗಿದ್ದು ಬಹುತೇಕ ಎಲ್ಲಾ ವ್ಯಾಪಾರ ವಾಣಿಜ್ಯ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ನಡೆದ ಕೋವಿಡ್ ಸಭೆ ಬಳಿಕ ನಡೆದ ಸುದ್ದಿ ಗೋಷ್ಠಿ ಯಲ್ಲಿ ತಿಳಿಸಿದರು.
ಮೆಟ್ರೊ ಹಾಗೂ ಬಸ್ ಗಳಲ್ಲಿ ಶೇ.100 ರಷ್ಟು ಓಡಾಟಕ್ಕೆ ಅವಕಾಶ, ದೇವಾಲಯ, ಮಸೀದಿ, ಚರ್ಚ್ ಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ, ಶಾಪಿಂಗ್ ಮಾಲ್ ಹಾಗೂ ಬಾರ್ ಗಳಲ್ಲಿ ಕುಳಿತಕೊಳ್ಳಲು ಅವಕಾಶ ಹಾಗೂ ಮದುವೆ ಸಮಾರಂಭಕ್ಕೆ 100 ಜನರಿಗೆ ಅವಕಾಶ ನೀಡಲಾಗಿದೆ.
ಹಾಗೂ ರಾಜ್ಯಾದ್ಯಂತ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ನೈಟ್ ಕಫ್ಯೂ೯ ಜಾರಿಯಲ್ಲಿರಲಿದೆ,
ವೀಕೆಂಡ್ ಕಫ್ಯೂ೯ ರದ್ದುಗೊಳಿಸಲಾಗಿದೆ, ಶಾಲಾ ಕಾಲೇಜುಗಳು ಹಾಗೂ ಚಿತ್ರಮಂದಿರಗಳು ತೆರೆಯಲು ಸದ್ಯಕ್ಕೆ ಅವಕಾಶ ಕಲ್ಪಿಸಿಲ್ಲ.
ಅನಲಾಕ್ 3.0 ಈ ಎಲ್ಲಾ ನಿಯಮಗಳು ಮುಂದಿನ 15 ದಿನಗಳ ವರೆಗೆ ಅಂದರೇ ಜುಲೈ 19 ರ ವರೆಗೆ ಜಾರಿಯಲ್ಲಿರುತ್ತದೆ.