ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು.
ಅವರು ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ಗಳನ್ನು ವಿತರಿಸಿ ಮಾತನಾಡಿದರು. ಮುಂದಿನ ಸ್ಪರ್ಧಾತ್ಮಕ ಬೆಳವಣಿಗೆ ತಕ್ಕಂತೆ ಸರ್ಕಾರವು ಹಲವಾರು ಬದಲಾವಣೆಗಳನ್ನು ತರುತ್ತಿದ್ದು ಅದರಂತೆ ಶಿಕ್ಷಣವೂ ಕೂಡ ದೊಡ್ಡ ಕ್ರಾಂತಿಯತ್ತ ಸಾಗಿದೆ ಎಂದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಲೋಹಿತ್ ಆರ್ ನಾಯಕ ಮಾತನಾಡಿದರು.
ವೇದಿಕೆಯಲ್ಲಿ ಪಪಂ ಅಧ್ಯಕ್ಷ ವಿಕ್ರಮ್ ರಾಯ್ಕರ್, ಸದಸ್ಯರಾದ ನಾರಾಯಣ ಗೌಡ ಮೆದಿಕೇರಿ, ಚಂದ್ರಶೇಖರ್ ನಾಲತವಾಡ, ಸೋಮಶೇಖರ್ ವೈಜಾಪುರ, ಉದ್ಯಮಿ ಬಸನಗೌಡ ಪಾಟೀಲ್, ಮುಖಂಡರಾದ ದುರುಗೇಶ ನಾರಿನಾಳ, ರುದ್ರಗೌಡ ಕುಲಕರ್ಣಿ, ಅಮರೇಶ ಗಾಂಜಿ, ಎಂ ಡಿ ಬಾಬು ಸೇರಿದಂತೆ ಇನ್ನಿತರರಿದ್ದರು.
ಉಪನ್ಯಾಸಕ ಶಂಕರಪ್ಪ ಸ್ವಾಗತಿಸಿದರು, ಲವಕುಮಾರ ವಂದಿಸಿದರು, ಉಪನ್ಯಾಸಕಿ ಡಾ.ಅರುಣಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು, ಉಪನ್ಯಾಸಕರಾದ ಮೆಹೆಬೂಬ ಸಾಬ ಒಂಟೆಳ್ಳಿ, ಡಾ. ಯಲ್ಲಮ್ಮ ಹಾಗೂ ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು.