ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ ಎನ್ ಶಾಮೀದ್ ತಾವರಗೇರಾ
ಕೊಪ್ಪಳ: ಜಿಲ್ಲೆಯ ಯಲಬುರ್ಗಾದ ಸಿಪಿಐ ನಾಗರೆಡ್ಡಿ ಯವರು ಈ ಹಿಂದೆ ಕುಕನೂರ ಪಟ್ಟಣದಿಂದ ಯಲಬುರ್ಗಾ ಪಟ್ಟಣದವರೆಗೆ ಕೇವಲ 2 ಗಂಟೆಯಲ್ಲಿ 15 ಕಿಲೋಮೀಟರ್ ಪಾದಯಾತ್ರೆ ಮಾಡುವ ಮೂಲಕ ಕರೊನಾ ನಿಯಂತ್ರಣ ಕ್ಕೆ ಜನಜಾಗೃತಿ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿ ನಂತರ ಇದೀಗ ತಮ್ಮ ಇಲಾಖೆಯ ವಾಹನ ಕೆಟ್ಟು ನಿಂತಾಗ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಆಗಬಾರದೆಂದು ತಾವೊಬ್ಬರೆ ವಾಹನವನ್ನು ಎಳೆದುಕೊಂಡು ರಸ್ತೆ ಪಕ್ಕಕ್ಕೆ ನಿಲ್ಲಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿದೆ.
ಯಲಬುರ್ಗಾ ಸಿಪಿಐ ಆದ ನಾಗರಡ್ಡಿ ಅವರು ಕರ್ತವ್ಯ ದ ಮೇಲೆ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಕೆಲಸ ಮುಗಿಸಿಕೊಂಡು ವಾಪಸ್ ಬರುವ ಇಲಾಖೆಯ ಸ್ಕಾರ್ಪಿಯೋ ವಾಹನ ಕೆಟ್ಟು ನಿಂತಿದ್ದರಿಂದ ಚಾಲಕ ಮೆಕಾನಿಕ್ ನನ್ನು ಕರೆದುಕೊಂಡು ಬರಲು ಹೋದಾಗ ರಸ್ತೆಯಲ್ಲಿ ನಿಂತಿದ್ದ ವಾಹನವನ್ನು ಪಕ್ಕಕ್ಕೆ ನಿಲ್ಲಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪಾದಯಾತ್ರೆ ಮೂಲಕ ಹೆಸರು ಗಳಿಸಿದ್ದ ನಾಗರಡ್ಡಿ ಅವರು ತಮ್ಮ ಇಲಾಖೆಯ ಜೊತೆಗೆ ಸಮಾಜಮುಖಿ ಕೆಲಸ ಮಾಡುತ್ತಿರುವುದು ಜಿಲ್ಲೆಯ ಜನರ ಹೆಮ್ಮೆಯ ಸಿಪಿಐ ಆಗಿ ಹೆಸರು ಮಾಡುತ್ತಿದ್ದಾರೆ.