ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಪಟ್ಟಣದ ಐತಿಹಾಸಿಕ ಹಿನ್ನೆಲೆಯುಳ್ಳ ಕೋಮು ಸೌಹಾರ್ದತೆಗೆ ರಾಜ್ಯದಲ್ಲಿಯೇ ಇತಿಹಾಸ ಹೊಂದಿರುವ ಶ್ರೀ ಶಾಮೀದ್ ಅಲಿ ಉರುಸ್ ಅನ್ನು ಕೋವಿಡ್ ಹರಡುವ ಸಂಭವ ಇರುವುದರಿಂದ ಈ ಬಾರಿಯ ಉರುಸ್ ಅನ್ನು ಜಿಲ್ಲಾಧಿಕಾರಿ ಗಳ ಆದೇಶದ ಮೇರೆಗೆ ರದ್ದುಪಡಿಸಲಾಗಿದೆ ಎಂದು ಕುಷ್ಟಗಿಯ ತಹಶಿಲ್ದಾರರ ರಾದ ಎಂ ಸಿದ್ದೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷ ವಿಜೃಂಭಣೆಯಿಂದ ಜರುಗುತಿದ್ದ ಶ್ರೀ ಶಾಮೀದ್ ಅಲಿ ಹಾಗೂ ಖಾಜಾ ಬಂದೇನವಾಜ ದರ್ಗಾ ಗಳ ಉರುಸ್ ಗೆ ರಾಜ್ಯದ ಮತ್ತು ಹೊರ ರಾಜ್ಯದ ಭಾಗಗಳಿಂದ ಸಾವಿರಾರು ಜನರು ಆಗಮಿಸಿ ಉರುಸ್ ನಲ್ಲಿ ಪಾಲ್ಗೊಳ್ಳುತ್ತಿದ್ದರು.
ಕಳೆದ ಬಾರಿ ಕೂಡ ಉರುಸ್ ರದ್ದಾಗಿದ್ದು, ಈ ವರ್ಷವೂ ಕೂಡ ರದ್ದಾಗಿದ್ದರಿಂದ ಭಕ್ತರಲ್ಲಿ ನಿರಾಶೆ ಮೂಡಿದಂತಾಗಿದೆ.
ಉರುಸ್ ನ ಸಂಧರ್ಬದಲ್ಲಿ ಸಾರ್ವಜನಿಕರು ಸೇರಿ ಮಾಡುವ ಎಲ್ಲಾ ಕಾರ್ಯಗಳನ್ನು ರದ್ದುಗೊಳಿಸಲಾಗಿದೆ.