ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಸಮೀಪದ ಕಿಲ್ಲಾರಹಟ್ಟಿ ಗ್ರಾಮ ಪಂಚಾಯತಿಯ ರಾಮಜಿ ನಾಯ್ಕ್ ತಾಂಡಾದಲ್ಲಿ ಬಾಲ್ಯ ವಿವಾಹ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೋಲಿಸರು ಹಾಗೂ ತಾಲೂಕ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಬಾಲ್ಯ ವಿವಾಹವನ್ನು ತಡೆಹಿಡಿದಿದ್ದಾರೆ.
ಭಾನುವಾರ ರಾತ್ರಿ ರಾಮಜಿ ನಾಯ್ಕ್ ತಾಂಡಾದ ಅಪ್ರಾಪ್ತ ವಯಸ್ಸಿನ ಮಗಳಿಗೆ ವಿವಾಹ ಮಾಡಿಕೊಡುವ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಠಾಣೆಯ ಪ್ರಭಾರ ಪಿಎಸ್ಐ ಮಲ್ಲಪ್ಪ ವಜ್ರದ ಹಾಗೂ ಸಿಬ್ಬಂದಿ ವರ್ಗ ಹಾಗೂ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕರು ಸ್ಥಳಕ್ಕೆ ತೆರಳಿ ಬಾಲ್ಯ ವಿವಾಹ ತಡೆಹಿಡಿದಿದ್ದಾರೆ. ನಂತರ ಸೋಮವಾರದಂದು ಸ್ಥಳೀಯ ಠಾಣೆಗೆ ಆಗಮಿಸಿದಾಗ ಪಿಎಸ್ಐ ಮಲ್ಲಪ್ಪ ವಜ್ರದ ಪಾಲಕರಿಗೆ ಮಾಹಿತಿ ನೀಡಿ, ಬಾಲ್ಯ ವಿವಾಹ ಮಾಡುವುದು ಕಾನೂನು ಬಾಹಿರವಾಗಿದ್ದು ಇದನ್ನು ಮೀರಿ ನಡೆದಲ್ಲಿ ಪಾಲಕರೇ ಹೊಣೆಗಾರರಾಗುತ್ತಿರಿ ಎಂದು ತಿಳಿಸಿದಾಗ ಇದಕ್ಕೆ ಒಪ್ಪಿಕೊಂಡ ಅವರು ಬಾಲ್ಯ ವಿವಾಹ ಮಾಡುವುದಿಲ್ಲವೆಂದು ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ.