ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ಮುದಗಲ್: ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ರಾಯಚೂರು ಜಿಲ್ಲಾ ಘಟಕ ಹಾಗೂ ಮಹಿಳಾ ಘಟಕ ಲಿಂಗಸುಗೂರು ತಾಲ್ಲೂಕು ಘಟಕ ಹಾಗೂ ಮಹಿಳಾ ಘಟಕ ವತಿಯಿಂದ ಮುದಗಲ್ ಹೋಬಳಿ ಸಂಕಷ್ಟದಲ್ಲಿರುವ ಜಾನಪದ ಕಲಾವಿದರಿಗೆ ಆಹಾರ ಪದಾರ್ಥಗಳ ದಿನಿಸಿ ಕಿಟ್ ಗಳನ್ನೂ ಲಿಂಗಸುಗೂರು ಶಾಸಕ ಡಿ ಎಸ್ ಹೂಲಗೇರಿ ವಿತರಣೆ ಮಾಡಿದರು.
ಕೊರೊನಾ ಎರಡನೇ ಅಲೆ ಜನರಿಗೆ ತೀವ್ರ ತೊಂದರೆ ಉಂಟು ಮಾಡಿದೆ. ವಿವಿಧ ಕ್ಷೇತ್ರದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಷತ್ತುಗಳು ಆಹಾರ ಧಾನ್ಯ ವಿತರಣೆ ಮಾಡುತ್ತಿರುವುದು ಸಂತಸ ತಂದಿದೆ. ರಾಯಚೂರು ಜಿಲ್ಲೆಯ ಡಾ.ಶರಣಪ್ಪ ಆನೆಹೊಸೂರು, ಲಕ್ಷ್ಮೀದೇವಿ ನಡವಿನಮನಿ ಅವರು ಜನಪರವಾದ ಕಾರ್ಯಗಳು ಮಾಡುತ್ತಿದ್ದಾರೆ.
ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಶರಣಪ್ಪ ಆನೆಹೊಸೂರು ಮಾತನಾಡಿ ಲಿಂಗಸುಗೂರು ತಾಲ್ಲೂಕಾದ್ಯಂತ
ನಿರ್ಗತಿಕ 100 ಜಾನಪದ ಕಲಾವಿದರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಗುವುದು. ಕಾರ್ಯಕ್ರಮಕ್ಕೆ ಆರ್ಥಿಕ ನೆರವು ನೀಡಿದ
ಪಿ.ಎಸ್.ಐ ಡಾಕೇಶ ಉಪ್ಪಾರ, ಡಾ.ಅಮರಗುಂಡಪ್ಪ, ಕರ್ನಾಟಕ ಸಪ್ಲೈಯಸ್ ಪ್ರೂಟ್ ಖಾಜಾ ಅವರಿಗೆ ಸ್ಮರಿಸಿದರು.
ಪುರಸಭೆ ಅಧ್ಯಕ್ಷೆ ಅಮೀನಾ ಬೇಗ ಬಾರಿಗಿಡ, ಕರ್ನಾಟಕ ಜಾನಪದ ಪರಿಷತ್ತು ಲಿಂಗಸುಗೂರು ಘಟಕದ ಅಧ್ಯಕ್ಷ ಮಹೇಂದ್ರ ಕುರ್ಡಿ, ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮೀದೇವಿ ನಡುಲಮನಿ, ಗೌರವಾಧ್ಯಕ್ಷೆ ಶಿವಮ್ಮ ಪಟ್ಟದಕಲ್, ಶಶಿಕಲಾ ಭೋವಿ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಹರ್ಷ ಮುತಾಲಿಕ, ಮುಖ್ಯಾಧಿಕಾರಿ ಮರಿಲಿಂಗಪ್ಪ, ಶಿವಾನಂದ ನರಹಟ್ಟಿ, ಹಾಜಿಮಲ್ಲಂಗ್ ಬಾಬಾ ಇದ್ದರು.