Tuesday , November 26 2024
Breaking News
Home / Breaking News / ತಾವರಗೇರಾ: ಕರೊನಾ ಸೇವೆಯಲ್ಲಿ ಕುಟುಂಬದ ಕಲ್ಯಾಣ ಕಾರ್ಯ ಮರೆತ ಶಾಮಣ್ಣ (ಬಾಂಬೆ) ನಾರಿನಾಳ..!

ತಾವರಗೇರಾ: ಕರೊನಾ ಸೇವೆಯಲ್ಲಿ ಕುಟುಂಬದ ಕಲ್ಯಾಣ ಕಾರ್ಯ ಮರೆತ ಶಾಮಣ್ಣ (ಬಾಂಬೆ) ನಾರಿನಾಳ..!

ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸರಕಾರಿ ಕೆಲಸ ದೇವರ ಕೆಲಸವೆಂದು ನಂಬಿಕೊಂಡಿರುವ ಕುಷ್ಟಗಿಯ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಾಮಣ್ಣ (ಬಾಂಬೆ) ನಾರಿನಾಳ ಅವರು ಕೊರೋನಾ ತುರ್ತು ಕರ್ತವ್ಯ ನಿರ್ವಹಣೆ ಕಾರ್ಯದ ನಿಮಿತ್ಯದಲ್ಲಿ ಭಾಗಿಯಾದ ಇವರು ತಮ್ಮ ಜೇಷ್ಠ ಸುಪುತ್ರ ಹನುಮೇಶ ಬಾಂಬೆ ಇವರ ವಿವಾಹ ನಿಶ್ಚಿರ್ತಾಕ್ಕೆ ಗೈರು ಆಗಿರುವುದು ಎಲ್ಲರ ಗಮನ ಸೆಳೆದಿದ್ದಾರೆ..!

ಚೋರ್ನುರು ಗ್ರಾಮದ ಎಂ ಎ ಪದವಿಧರೆ ಪಲ್ಲವಿ ಎಂಬುವವರ ಜೊತೆಗೆ ದಿನಾಂಕ 17.06.2021 ರಂದು ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಕೊರೋನಾ ವೈರಸ್ ಹರಡುವ ಹಿನ್ನಲೆಯಲ್ಲಿ ಜಾರಿಗೆ ಬಂದಿದ್ದ “ಲಾಕ್ ಡೌನ” ಸಮಯದಲ್ಲಿ ಬಹಳಷ್ಟು ಜವಾಬ್ದಾರಿ ಹೊಂದಿದ AEE ಶ್ಯಾಮಣ್ಣ (ಬಾಂಬೆ) ಸರಕಾರಿ ಕರ್ತವ್ಯಕ್ಕೆ ಹಾಜರಾಗುವ ಮೂಲಕ ತನ್ನ ಕುಟುಂಬದ ಕಲ್ಯಾಣ ಕಾರ್ಯಕ್ಕೆ ಗೈರಾಗಿರುವ ಈ ಹಿರಿಯ ಅಧಿಕಾರಿಯ ವಿಶೇಷ ಕಳಕಳಿಗೆ ಈ ಭಾಗದ ಜನರು ಪೀಧಾ ಆಗಿದ್ದಾರೆ. ಕುಟುಂಬದ ಕಾರ್ಯಕ್ರಮಗಳಿಗೆ ತಿಂಗಳು ಗಟ್ಟಲೇ ರಜಾ ಹಾಕಿ ಸರಕಾರದ ಕೆಲಸಕ್ಕೆ ಅಡ್ಡಿಪಡಿಸುವ ಅಧಿಕಾರಿಗಳ ಮಧ್ಯೆ ಈ ವಿಶಿಷ್ಟ ಅಧಿಕಾರಿ ಶಾಮಣ್ಣ ನಾರಿನಾಳ ಅವರಿಗೆ ನಮ್ಮದೊಂದು ಸಲಾಂ..!

About N Shameed

Check Also

ತಾವರಗೇರಾ:- ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿ ಸಿ ಬಸ್ …

error: Content is protected !!