Friday , November 22 2024
Breaking News
Home / Breaking News / ಮನುಕುಲಕ್ಕೆ ಮಾದರಿಯಾದ ‘ಮಂಗ’..

ಮನುಕುಲಕ್ಕೆ ಮಾದರಿಯಾದ ‘ಮಂಗ’..

 

 

ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ: ನಾಗರಾಜ್ ಎಸ್ ಮಡಿವಾಳರ್ 

ಮುದುಗಲ್: ಮನುಷ್ಯ ಮನುಷ್ಯರ ನಡುವೆಯೇ ಮರೆಯಾಗುತ್ತಿರುವ ಮಾನವೀಯತೆಯಲ್ಲಿ ಪ್ರಾಣಿಯೊಂದು ಮನುಷ್ಯತ್ವದ ನಿಜ ಬಣ್ಣ ಏನೇನ್ನುವದನ್ನು ಜನತೆಗೆ ತೋರಿಸಿಕೊಟ್ಟ ಘಟನೆ ಸಮೀಪದ ನಾಗರಹಾಳ ಗ್ರಾಮದಲ್ಲಿ ನಡೆದಿದೆ.

“ಮಂಗ” ನಿಂದ “ಮಾನವ” ಎಂಬ ನಾಣ್ಣುಡಿಯಂತೆ ನಾಗರಹಾಳ ಗ್ರಾಮದಲ್ಲಿರುವ ಮಂಗ (ಕೋತಿ) ವೊಂದು ಮರಣ ಹೊಂದಿದ ಮಾನವರ ಮಣ್ಣಿಗೆ ಹೋಗಿ ಸಮಾಧಿಗೆ ಮಣ್ಣು ಹಾಕುವದರ ಮೂಲಕ ತನ್ನ ಇತಿಹಾಸ ದಂತೆ ಮಾನವೀಯ ಮೌಲ್ಯ ಮೆರೆದಿರುವದು ಗ್ರಾಮಸ್ಥರಲ್ಲಿ ಅಚ್ಚರಿಗೆ ಕಾರಣವಾಗಿದೆ.

ಕಳೆದ 5 ದಿನಗಳ ಹಿಂದೆ ಮರಣಹೊಂದಿದ ಹನುಮಪ್ಪ ದೇವರಹೊಳೆ ಎಂಬಾತನ ಅಂತ್ಯಸಂಸ್ಕಾರ ದಲ್ಲಿ ಭಾಗಿಯಾಗಿದ್ದ ಮಂಗವು ಮತ್ತೊಮ್ಮೆ ಅದೇ ಗ್ರಾಮದಲ್ಲಿ ಭಾನುವಾರದಂದು ಗುಂಡಪ್ಪ ಇಚನಾಳ ಎಂಬುವವರು ಮರಣ ಹೊಂದಿದ ತಕ್ಷಣ ಅವರ ಮನೆ ಬಳಿ ಬಂದು ನಂತರ ಅವರ ಅಂತ್ಯಕ್ರಿಯೆ ಯಲ್ಲೂ ಭಾಗಿಯಾಗಿರುವುದು ಮಾನವರಲ್ಲಿರದ ಕರುಣೆ ಹಾಗೂ ಸಂಬಂಧಗಳ ಬಾಂಧವ್ಯವನ್ನು ಪ್ರಾಣಿಯೊಂದು ತೊರಿಸಿಕೊಟ್ಟು ಮಾನವ ಕುಲಕ್ಕೆ ಮಾದರಿಯಾಗಿದ್ದು ವಿಶೇಷವಾಗಿದೆ.

About Nagaraj M

Check Also

ತಾವರಗೇರಾ:- ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿ ಸಿ ಬಸ್ …

error: Content is protected !!