ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಪಟ್ಟಣದ 14 ನೇ ವಾರ್ಡಿನ ಸದಸ್ಯೆ ಮಂಗಳಾ ಬಸವರಾಜ ಈಡಿಗೇರ ಹಾಗೂ ಹಾಗೂ ಇಂಚರ ಬಳಗದವರು ತಮ್ಮ ವಾರ್ಡಿನ ಬಡ ನಿರ್ಗತಿಕ ಕುಟುಂಬಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಆಹಾರ ಕಿಟ್ ಗಳನ್ನು ವಿತರಿಸದರು.
ನಂತರ ಮಾತನಾಡಿ ವಾರ್ಡಿನ ಬಡವರಿಗೆ ಅನುಕೂಲ ವಾಗಲೆಂದು ಬಡವರನ್ನು ಗುರುತಿಸಿ ಕಿಟ್ ಗಳನ್ನು ನೀಡಲಾಗುತ್ತಿದ್ದು ಲಾಕ್ ಡೌನ ಸಂಧರ್ಬದಲ್ಲಿ ಜನರಿಗೆ ಸ್ವಲ್ಪ ಮಟ್ಟಿಗೆಯಾದರು ಸಹಾಯವಾಗಲೆಂದು ಆಹಾರ ಕಿಟ್ ಗಳನ್ನು ವಿತರಿಸಿದ್ದೆವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಮಣ್ಣ ಹುನಗುಂದ, ವಿರುಪಣ್ಣ ಕೊಪ್ಪರದ, ಶರಣಪ್ಪ ದುಮತಿ, ಶಿವು ಬಳೂಟಗಿ, ಹಂಪಣ್ಣ ಬಳಿಗಾರ, ಶಿವು ಕಂದಗಲ್ಲ, ಕನೋಲಪ್ಪ ಕಲಾಲ, ವಿರೇಶ ಹುಟ್ಟಿನ, ಭೀಮಣ್ಣ ಪತ್ತಾರ ಸೇರಿದಂತೆ ಇನ್ನಿತರರಿದ್ದರು.
ಬಿಜೆಪಿ ಪಕ್ಷದಿಂದ ಆಹಾರ ಕಿಟ್ ಗಳ ವಿತರಣೆ: ಪಟ್ಟಣದ ಪತ್ರಕರ್ತರಿಗೆ ಹಾಗೂ ಪತ್ರಿಕಾ ವಿತರಕರಿಗೆ ಹಾಗೂ ಸವಿತಾ ಸಮಾಜದ ಕುಟುಂಬದವರಿಗೆ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾದ ದೊಡ್ಡನಗೌಡ ಪಾಟೀಲ್ ನೀಡಿದ ದಿನಸಿ ಕಿಟ್ ಗಳನ್ನು ಅಂಬೇಡ್ಕರ್ ವೃತ್ತದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡ ಚಂದ್ರಶೇಖರ್ ನಾಲತವಾಡ ಮಾತನಾಡಿ ಸಾರ್ವಜನಿಕ ವಲಯದಲ್ಲಿ ಪತ್ರಕರ್ತರು ಕೂಡ ಕರೊನಾ ವಾರಿಯಸ್೯ ಆಗಿ ಕೆಲಸ ಮಾಡುತ್ತಿದ್ದು, ಸರ್ಕಾರದಿಂದ ಯಾವುದೇ ಸಹಾಯ ನೀಡುತ್ತಿಲ್ಲ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳನ್ನು ಗುರುತಿಸಿ ಪಕ್ಷದ ವತಿಯಿಂದ ಆಹಾರ ದ ಕಿಟ್ ಗಳನ್ನು ವಿತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸಾಗರ ಭೇರಿ, ಚನ್ನಪ್ಪ ಸಜ್ಜನ, ಮಂಜುನಾಥ್ ಜೂಲಕುಂಟಿ, ಶಾಮೂರ್ತಿ ಅಂಚಿ, ರಾಘವೇಂದ್ರ ನಾಯಕ, ಮಂಜುನಾಥ ದೇಸಾಯಿ, ವೀರಭದ್ರಪ್ಪ ಬುಡಕುಂಟಿ ಸೇರಿದಂತೆ ಪತ್ರಕರ್ತರು ಹಾಗೂ ಪತ್ರಿಕಾ ವಿತರಕರು ಉಪಸ್ಥಿತರಿದ್ದರು.