ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ : ನಾಗರಾಜ್ ಎಸ್ ಮಡಿವಾಳರ್
ಲಿಂಗಸುಗೂರು: ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಅವರನ್ನು ಅಮಾನತ್ತುಗೊಳಿಸಿ ಬಿ.ವಿ ಕಾವೇರಿ ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿದ್ದಾರೆ.
ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ರಾಯಚೂರ ಅವರು ಸಲ್ಲಿಸಿದ ವರದಿ ಆಧರಸಿ ಮೇಲ್ನೊಟಕ್ಕೆ ಸತ್ಯವೆಂದು ಕಂಡು ಬಂದಿದ್ದರಿಂದ ಕರ್ನಾಟಕ ನಾಗರಿಕ ಸೇವಾ ನಿಯಂತ್ರಣ ೧೯೫೭ ರಡಿ ಇಲಾಖೆ ವಿಚಾರಣೆ ಕಾಯ್ದಿರಿಸಿ ಆದೇಶ ಹೊರಡಿಸಲಾಗಿದೆ.
ಮುಖ್ಯಾಧಿಕಾರಿಗಳು ತಮ್ಮ ಸೇವಾ ಅವಧಿಯಲ್ಲಿ ಡಿಜಿಟಲ್ ಕೀ ದುರ್ಬಳಕೆ, ಅನಧಿಕೃತ ಗೈರು, ಪುರಸಭೆ ನಿಯಮಗಳನ್ನು ಉಲ್ಲಂಘಿಸಿ ಅಧಿಕಾರ ದುರ್ಬಳಕೆ, ಘನತ್ಯಾಜ್ಯ ವಿಲೆವಾರಿ ವಾಹನಗಳ ಹೆಸರಲ್ಲಿ ದಾಖಲೆ ಇಲ್ಲದೆ ಲಕ್ಷಾಂತರ ಹಣ ದುರ್ಬಳಕೆ, ರೂ. ೪.೯೫ ಲಕ್ಷ ಅಕ್ರಮ ಬಿಲ್ ಪಾವತಿ ಸೇರಿದಂತೆ ಇತರೆ ಆರೋಪಗಳ ದೂರು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ.
ಅಮಾನತ್ತು ಗೊಳಿಸಿದ ಪೌರಾಡಳಿತ ನಿರ್ದೇಶನಾಲಯ ಮೂಲ ಹುದ್ದೆ ಸಮೂಹ ಸಂಘಟನಾ ಅಧಿಕಾರಿಯಾಗಿ ತೆಕ್ಕಲಕೋಟೆಗೆ ನಿಯೋಜಿಸಲಾಗಿದೆ