ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಬರಿ ಆರೋಪಗಳನ್ನು ಬಿಟ್ಟು ಜನರಿಗಾಗಿ ಕೆಲಸ ಮಾಡಿ ಎಂದು ಹೊನ್ನಪ್ಪ ಮೇಟಿ ಹೇಳಿದರು. ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಲಿಂಗಸಗೂರು ಶಾಸಕರಾದ ಡಿ ಎಸ್ ಹೂಲಗೇರಿ ರವರು ತಮ್ಮ ಹುಟ್ಟುಹಬ್ಬದ ಆಚರಣೆ ಬೇಡ ಎಂದರು ಕೂಡ ಅಭಿಮಾನಿಗಳ ಒತ್ತಾಯದ ಮಾಡಿ ಅವರ ನಿವಾಸದಲ್ಲೇ ಆಚರಣೆ ಮಾಡಲಾಗಿದೆ ಸರಕಾರದ ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆ. ಸಿದ್ದು ವಾಯ್ ಬಂಡಿ ರವರು ತಮ್ಮ ಕಾರ್ಯಕ್ರಮಗಳಲ್ಲಿ ಎಲ್ಲ ಸರಕಾರದ ಕರೋನ ನಿಯಗಳನ್ನು ಪಾಲಿಸಿದ್ದೀರಾ. ಮಾಜಿ ಶಾಸಕ ಮಾನಪ್ಪ ವಜ್ಜಲ್ ರವರು ಬೃಹತ್ ವಾಹನಗಳ ಪೂಜೆಗೆ ಸಾವಿರಾರು ಜನ ಸೇರಿದ್ದು ಸಿದ್ದು ಬಂಡಿ ರವರ ಕಣ್ಣುಗೆ ಕಾಣಲಿಲ್ಲವೇ.ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹೆಚ್ಚಾಗಿದ್ದು ಜನರು ಪರದಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕಳೆದ 3-4 ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ಪ್ರತಿಭಟನೆ ಮಾಡುವಾಗ ಕೂಡ ಕೇವಲ 20 ಜನ ಸೇರಿ ಪ್ರತಿಭಟನೆ ಮಾಡುವ ಮೂಲಕ ಸರಕಾರದ ನಿಯಮಗಳನ್ನ ಪಾಲಿಸುತ್ತಿದ್ದಾರೆ. ಮುದಗಲ್
ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ವಿದ್ಯುತ್ ಸಮಸ್ಯೆ ಇರುವುದರಿಂದ ನೀರು ಸರಬರಾಜಿನಲ್ಲಿ ಸಮಸ್ಯೆ ಉಂಟಾಗುತ್ತಿದೆ.ಶಾಸಕರು ಪುರಸಭೆ ಸಿಬ್ಬಂದಿಗಳಿಗೆ ವಾರದಲ್ಲಿ 3 ದಿನಕ್ಕೊಮ್ಮೆ ನೀರು ಬಿಡಿಲು ಸೂಚಸಿದ್ದಾರೆ ಶಾಸಕರಿಗೆ ಕ್ಷೇತ್ರದ ಜನರ ಕಾಳಜಿ ಹೊಂದಿದ್ದಾರೆ ಎಂದರು.