Friday , September 20 2024
Breaking News
Home / Breaking News / ತಾವರಗೇರಾ: ಕರೊನಾ ವಾರಿಯಸ್೯ ಗೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲರಿಂದ ಆಹಾರದ ಕಿಟ್ ಗಳ ವಿತರಣೆ..!

ತಾವರಗೇರಾ: ಕರೊನಾ ವಾರಿಯಸ್೯ ಗೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲರಿಂದ ಆಹಾರದ ಕಿಟ್ ಗಳ ವಿತರಣೆ..!

ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ ಕರೊನಾ ವಾರಿಯಸ್೯ ಗಳಾದ ಆಶಾ ಕಾರ್ಯಕರ್ತೆ ಯರಿಗೆ ಗೃಹರಕ್ಷಕ ದಳ, ಪತ್ರಕರ್ತರು ಹಾಗೂ ಪತ್ರಿಕಾ ವಿತರಕರಿಗೆ ಕುಷ್ಟಗಿ ಮಾಜಿ ಶಾಸಕರು ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾದ ದೊಡ್ಡನಗೌಡ ಪಾಟೀಲ್ ದಿನಸಿ ಕಿಟ್ ಗಳನ್ನು ವಿತರಿಸಿದರು.
ಸ್ಥಳೀಯ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಕಿಟ್ ಗಳನ್ನು ವಿತರಸಿ ಮಾತನಾಡಿ, ಕರೊನಾ ಸಂಕಷ್ಟದ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಕರೊನಾ ವಾರಿಯಸ್೯ ಗಳು ಸಮಾಜಮುಖಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ವಾಗಿದೆ. ಅವರ ಸೇವೆಯನ್ನು ಯಾರು ಮರೆಯುವಂತಿಲ್ಲ ಎಂದು ಹೇಳಿದರು.

ನಂತರ ಮುಖಂಡ ಚಂದ್ರಶೇಖರ ನಾಲತವಾಡ ಮಾತನಾಡಿ ಕರೊನಾ ಸಂಧರ್ಬದಲ್ಲಿ ಕಾಂಗ್ರೆಸ್ ಪಕ್ಷದವರು ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ನಾಚಿಕೆಗೆಡಿನಿ ಸಂಗತಿಯಾಗಿದೆ ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನವರು ರಾಜಕೀಯ ಮಾಡುವದನ್ನು ಬಿಟ್ಟು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಪಂಚಾಯತ ಸದಸ್ಯ ಕೆ.ಮಹೇಶ್, ಪಪಂ ಸದಸ್ಯ ರಾದ ಚನ್ನಪ್ಪ ಸಜ್ಜನ, ವಿರೇಶ ಭೋವಿ, ಮುಖಂಡರಾದ ಸಾಗರ ಭೇರಿ, ಮಂಜುನಾಥ ಜೂಲಕುಂಟಿ, ಬಸನಗೌಡ ಓಲಿ, ಶಂಭುನಗೌಡ ಪಾಟೀಲ್, ಮಂಜು ದೇಸಾಯಿ, ಲಕ್ಷ್ಮಣ ಮುಖಿಯಾಜಿ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!