ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ ಎನ್ ಶಾಮೀದ್ ತಾವರಗೇರಾ
ಕಾರಟಗಿ: ಸ್ಥಳೀಯ ನಿವಾಸಿ ದಿಲೀಪ್ ಎನ್ನುವವರು ಮನೆಯಲ್ಲಿ ರಾತ್ರಿ ಮಲಗುವ ಮುನ್ನ ಬಂಗಾರದ ಸರ ಬಿಚ್ಚಿಟ್ಟು ಮಲಗಿದ್ದರು ಬೆಳಗಾಗುವಷ್ಟರಲ್ಲಿ ಬಂಗಾರದ ಚೈನ್ ತುಂಡು ತುಂಡು ಮಾಡಿ ನುಂಗಿದ್ದ ಸಾಕು ನಾಯಿ…
ಎರಡು ತೋಲಿ ಬಂಗಾರದ ಚೈನ್ ನುಂಗಿದ ಸಾಕು ನಾಯಿ ಇದನ್ನು ತಿಳಿದ ದಿಲೀಪ್ ಪಶು ವ್ಯದ್ಯರ ಹತ್ತಿರ ನಾಯಿ ತಪಾಸಣೆಗೆ ಹೋಗಿ ನಾಯಿ ಆರೋಗ್ಯ ವಿಚಾರಿಸಿದ, ಎರಡು ತಿಂಗಳ ನಾಯಿ ಆದ್ದರಿಂದ ಆಪರೇಶನ್ ಬೇಡಾ ಎಂದ ವೈದ್ಯರು..
ಬಹಿರ್ದೆಸೆ (ಮಲ) ಮೂಲಕ ಹೊರಬಂತು ತುಂಡು ತುಂಡು ಬಂಗಾರ.. ನಾಯಿ ಹೊಟ್ಟೆಯೊಳಗಿರುವ ಇನ್ನೂ ಒಂದೂವರೆ ತೊಲಿ ಬಂಗಾರ, ನಾಯಿ ಹೊಟ್ಟೆಯಲ್ಲಿ ಬಂಗಾರ ಇರೋದ್ರಿಂದ ನಾಯಿ ಬಹಿರ್ದೆಸೆ ಮಾಡುವದನ್ನೆ ಕಾಯಿತ್ತ ಕುಳಿತುಕೊಳ್ಳಬೇಕಾದ ಮಾಲೀಕರು.